ಪತ್ನಿ ಹಾಗೂ ಪುಟ್ಟ ಮಗಳನ್ನು ಕಟ್ಟಿಗೆಯಿಂದ ಹೊಡೆದು ಕೊಂದ ಪಾಪಿ! - Mahanayaka
4:39 AM Thursday 23 - January 2025

ಪತ್ನಿ ಹಾಗೂ ಪುಟ್ಟ ಮಗಳನ್ನು ಕಟ್ಟಿಗೆಯಿಂದ ಹೊಡೆದು ಕೊಂದ ಪಾಪಿ!

kalaburgi sedam
23/09/2021

ಸೇಡಂ:  ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ ಮಗಳನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಪಟ್ಟಣದ ವಿಶ್ವನಗರ ಬಡಾವಣೆಯಲ್ಲಿ ನಡೆದಿದ್ದು, ಪ್ರಾಥಮಿಕ ಮಾಹಿತಿಗಳ ಪ್ರಕಾರ ಕಟ್ಟಿಗೆಯಿಂದ ಹೊಡೆದು ತಾಯಿ ಮಗಳನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಪಾನಿಪೂರಿ ವ್ಯಾಪಾರ ಮಾಡಿಕೊಂಡಿದ್ದ ಕಲಬುರ್ಗಿ ನಿವಾಸಿ 47 ವರ್ಷ ವಯಸ್ಸಿನ ದಿಗಂಬರ ಹಣಮಂತಪ್ಪ ಗಾಂಜಾಲಿ, ತನ್ನ ಪತ್ನಿ ಹಾಗೂ 11 ವರ್ಷ ವಯಸ್ಸಿನ ಮಗಳನ್ನೇ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. 35 ವರ್ಷ ವಯಸ್ಸಿನ ಪತ್ನಿ ಜಗದೇವಿ ಹಾಗೂ ಮಗಳು ಪ್ರಿಯಾಂಕಾ ದಿಗಂಬರ ಹತ್ಯೆಗೀಡಾದವರು ಎಂದು ತಿಳಿದು ಬಂದಿದೆ.

ಸದ್ಯದ ಮಾಹಿತಿಯ ಪ್ರಕಾರ ಎರಡು ತಿಂಗಳ ಹಿಂದೆ ಕಲಬುರ್ಗಿಯಿಂದ ಈ ಕುಟುಂಬ ಪಟ್ಟಣದಲ್ಲಿ ಬಂದು ನೆಲೆ ನಿಂತಿತ್ತು ಎನ್ನಲಾಗಿದೆ. ಹತ್ಯೆಗೆ ಕುಟುಂಬ ಕಲಹ ಕಾರಣ ಇರಬಹುದು ಎಂದು ಮೇಲ್ನೋಟಕ್ಕೆ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HpGUvPNd4TWBQJG8MXH5on]

ಇನ್ನಷ್ಟು ಸುದ್ದಿಗಳು…

ಮೊಬೈಲ್ ಚಾರ್ಜ್ ಇಡುವ ವೇಳೆ ವಿದ್ಯುತ್ ಶಾಕ್ ತಗಲಿ ಒಂದೇ ಕುಟುಂಬದ ಮೂವರ ದಾರುಣ ಸಾವು

ಸಾಲ ತೀರಿಸಲು ಸಿಎಂನ ಪ್ರತಿಮೆಯನ್ನೇ ಮಾರಾಟಕ್ಕಿಟ್ಟ ಅಭಿಮಾನಿ!

ಗೋಬಿ ಮಂಚೂರಿ, ಎಗ್ ರೈಸ್ ಕೊಡಿಸುವ ನೆಪದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ!

ಜಾತಿ ಪೀಡೆಗಳನ್ನು ಮಟ್ಟ ಹಾಕಲು ನಡೆಯಲಿದೆ ಗುಪ್ತ ಸಮೀಕ್ಷೆ: ಅಸ್ಪೃಶ್ಯತೆ ಆಚರಿಸಿದರೆ ಜೈಲೂಟ ಗ್ಯಾರೆಂಟಿ

ಮದುವೆಯಾದ ಕೆಲವೇ ಹೊತ್ತಿನಲ್ಲಿ ಪ್ರೇಮಿಯೊಂದಿಗೆ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಪೋಷಕರು!

ಗೆಳೆಯನ ಜೊತೆಗೆ ಗೋವಾ ಪ್ರವಾಸಕ್ಕೆ ತೆರಳಿದ್ದ ನಟಿ ಕಾರು ಅಪಘಾತದಲ್ಲಿ ದಾರುಣ ಸಾವು!

ತರಗತಿ ಕೋಣೆಯಲ್ಲಿಯೇ ಮಹಿಳೆಯೊಂದಿಗೆ ಅಸಹ್ಯವಾಗಿ ನಡೆದುಕೊಂಡ ಮುಖ್ಯ ಶಿಕ್ಷಕ | ವಿಡಿಯೋ ವೈರಲ್

 

ಇತ್ತೀಚಿನ ಸುದ್ದಿ