ಪತ್ನಿಯನ್ನು ಚುನಾವಣೆಯಲ್ಲಿ ಸೋಲಿಸಿದ ಗ್ರಾಮಸ್ಥರಿಗೆ ತಕ್ಕ ಪಾಠ ಕಲಿಸಿದ ಪತಿ!
ಕಲಬುರಗಿ: ಪಂಚಾಯತ್ ಚುನಾವಣೆಯಲ್ಲಿ ತನ್ನ ಪತ್ನಿಯನ್ನು ಸೋಲಿಸಿದ್ದಕ್ಕಾಗಿ ಇಡೀ ಗ್ರಾಮಕ್ಕೆ ನೀರು ಬಂದ್ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋಳಕೂರು ಗ್ರಾಮದಲ್ಲಿ ನಡೆದಿದೆ.
ಸುಧಾ ರಮೇಶ್ ಪಾಟೀಲ್ ಗೌಡ ಎಂಬವರು ವಾರ್ಡ್ ನಂಬರ್ 4ರಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಕ್ಷೇತ್ರದಿಂದ ಇವರು ಸ್ಪರ್ಧಿಸಿದ್ದರು. ಅನೇಕ ವರ್ಷಗಳಿಂದ ಗ್ರಾಮಕ್ಕೆ ಕುಡಿಯುವ ನೀರನ್ನು ರಮೇಶ್ ತಮ್ಮ ಜಮೀನಿನಲ್ಲಿದ್ದ ಕೊಳವೆ ಬಾವಿಯಿಂದ ಗ್ರಾಮಸ್ಥರಿಗೆ ಒದಗಿಸಿದ್ದರು. ಹೀಗಾಗಿ ತಮ್ಮ ಪತ್ನಿಯನ್ನು ಚುನಾವಣೆಯಲ್ಲಿ ಗೆಲ್ಲಿಸುತ್ತಾರೆ ಎಂದು ರಮೇಶ್ ಅಂದುಕೊಂಡಿದ್ದರೆ, ಇತ್ತ ಗ್ರಾಮಸ್ಥರು ಮಾತ್ರ ರಮೇಶ್ ಗೌಡ ಅವರ ಪತ್ನಿಯನ್ನು ಸೋಲಿಸಿದ್ದಾರೆ.
ರಮೇಶ್ ಅವರು ಗ್ರಾಮದ ದಾಹವನ್ನು ತೀರಿಸಿದ್ದರೂ, ಜನರು ಅವರನ್ನು ನೆನಪು ಮಾಡಿಕೊಳ್ಳಲಿಲ್ಲ. ಇದರಿಂದಾಗಿ ತೀವ್ರವಾಗಿ ನೊಂದ ರಮೇಶ್ ಅವರು ಗ್ರಾಮಕ್ಕೆಒದಗಿಸುತ್ತಿದ್ದ ನೀರನ್ನು ನಿಲ್ಲಿಸಿದ್ದಾರೆ. ಇದರಿಂದಾಗಿ ಇದೀಗ ಸಾವಿರಾರು ಜನರು ನೀರಿಗಾಗಿ ಪರದಾಟ ಆರಂಭಿಸಿದ್ದಾರೆ.
ನಾನು ಜನರ ಮೇಲೆ ಬಹಳ ವಿಶ್ವಾಸ ಇಟ್ಟುಕೊಂಡಿದ್ದೆ. ಆದರೆ, ಜನರು ನನ್ನ ಮನಸ್ಸನ್ನು ಘಾಸಿಗೊಳಿಸಿದರು. ಹೀಗಾಗಿ ನನ್ನ ಕೃಷಿ ಕೊಳವೆ ಬಾವಿಯಿಂದ ವಾರ್ಡ್ ನಂಬರ್ 4ಕ್ಕೆ ನೀಡುತ್ತಿದ್ದ ನೀರು ಪೂರೈಕೆಯನ್ನು ನಿಲ್ಲಿಸಿದ್ದೇನೆ ಎಂದು ಸುಧಾ ಅವರ ಪತ್ನಿ ರಮೇಶ್ ಗೌಡ ಹೇಳಿದ್ದಾರೆ.
ಇಲ್ಲಿಯವರೆಗೆ ನೀರಿನ ಸಮಸ್ಯೆ ಇಲ್ಲದೇ ಜೀವಿಸಿದ್ದ ಗ್ರಾಮಸ್ಥರು ಇದೀಗ ನೀರಿನ ಸಮಸ್ಯೆಯಿಂದಾಗಿ ಪರದಾಡುತ್ತಿದ್ದಾರೆ.



























