ಟ್ರಾಕ್ಟರ್ ನಡಿಗೆ ಸಿಲುಕಿ 4 ವರ್ಷದ ಬಾಲಕಿ ಸಾವು
08/01/2021
ಬಾಗಲಕೋಟೆ: ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಟ್ರಾಕ್ಟರ್ ನಡಿಗೆ ಸಿಲುಕಿ ಬಾಲಕಿ ಸಾವಿಗೀಡಾಗಿರುವ ದಾರುಣ ಘಟನೆ ತೇರದಾಳ ತಾಲೂಕಿನ ಗೋಲಬಾವಿ ಗ್ರಾಮದಲ್ಲಿ ನಡೆದಿದೆ.
ಟ್ರಾಕ್ಟರ್ ನಲ್ಲಿ ರಾಶಿ ರಾಶಿ ಕಬ್ಬು ತುಂಬಿಕೊಂಡು ಸಾಗುತ್ತಿದ್ದ ವೇಳೆ 4 ವರ್ಷದ ಬಾಲಕಿ ಟ್ರಾಕ್ಟರ್ ನ ಅಡಿಗೆ ಬಿದ್ದಿದ್ದಾಳೆ. ಪ್ರತೀಕ್ಷಾ ಕರಿಗಾರ ಮೃತ ಬಾಲಕಿಯಾಗಿದ್ದಾಳೆ. ಘಟನಾ ಸ್ಥಳದಲ್ಲಿ ಬಾಲಕಿಯ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿತ್ತು.
ಘಟನಾ ಸ್ಥಳಕ್ಕೆ ತೇರದಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ಟ್ರಾಕ್ಟರ್ ಚಾಲಕನ ವಿರುದ್ಧ ಮುಂದಿನ ಕ್ರಮ ಕೈಗೊಂಡಿದ್ದಾರೆ.