ಲಡ್ಡು ಬಗ್ಗೆ ಯಾರೂ ಮಾತನಾಡೋ ಹಾಗಿಲ್ಲ: ಖ್ಯಾತ ತಮಿಳು ನಟನ ವಿರುದ್ಧ ಪವನ್ ಕಲ್ಯಾಣ್ ಗರಂ
ತಿರುಪತಿ ತಿರುಮಲ ದೇವಸ್ಥಾನದಲ್ಲಿ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬಿನ ತುಪ್ಪ ಬಳಸಿರುವ ಘಟನೆ ನಡೆದಿತ್ತು. ಇದೀಗ ತಿರುಪತಿ ಲಡ್ಡು ವಿಚಾರದ ಬಗ್ಗೆ ಯಾರೇ ಮಾತನಾಡಿದರೂ, ಪವನ್ ಕಲ್ಯಾಣ್ ಅವರ ವಿರುದ್ಧ ತಿರುಗಿ ಬೀಳುತ್ತಿದ್ದಾರೆ. ಲಡ್ಡು ವಿಚಾರದಲ್ಲಿ ಯಾರೂ ಮಾತನಾಡಬಾರದು ಅಂತ ಗರಂ ಆಗುತ್ತಿದ್ದಾರೆ.
ಹೌದು..! ತಮಿಳಿನ ಖ್ಯಾತ ನಟ ಸೂರ್ಯ ಅವರ ಸಹೋದರ, ಖ್ಯಾತ ನಟರೂ ಆಗಿರುವ ಕಾರ್ತಿಕ್ ಮೇಲೆ ಇದೀಗ ಪವನ್ ಕಲ್ಯಾಣ್ ತಿರುಗಿ ಬಿದ್ದಿದ್ದಾರೆ. ಸಿನಿಮಾದ ಸಮಾರಂಭದಲ್ಲಿ ಕಾರ್ತಿ ನೀಡಿದ ಹೇಳಿಕೆ ವಿರುದ್ಧ ಪವನ್ ಕಲ್ಯಾಣ್ ಗರಂ ಆಗಿದ್ದಾರೆ.
ಸಿನಿಮಾ ಸಮಾರಂಭದಲ್ಲಿ ಸಂದರ್ಭವೊಂದರಲ್ಲಿ ಮಾತನಾಡಿದ ಕಾರ್ತಿ, “ಲಡ್ಡು ವಿಚಾರ ಈಗ ಬೇಡ, ಅದು ತುಂಬಾ ಸೆನ್ಸಿಟಿವ್” ಎಂದು ಹೇಳಿಕೆ ನೀಡಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪವನ್ ಕಲ್ಯಾಣ್ ಕಾರ್ತಿ ವಿರುದ್ಧ ಗರಂ ಆಗಿದ್ದಾರೆ.
ನಾನು ಸಿನಿಮಾ ಮಂದಿಗೆ ಎಚ್ಚರಿಕೆ ನೀಡ್ತೀನಿ ಒಂದೋ ಗೌರವದಿಂದ ಮಾತನಾಡಿ, ಇಲ್ಲವೇ ಮಾತನಾಡಲೇ ಬೇಡಿ, ನೀವು ತಮಾಷೆ ಮಾಡಿದರೆ ಜನರು ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಕಾರ್ತಿ ವಿರುದ್ಧ ಕಿಡಿಕಾರಿದ್ದಾರೆ.
ಲಡ್ಡುವಿನ ಬಗ್ಗೆ ನೀವು ತಮಾಷೆ ಮಾಡುತ್ತೀರಿ..! ಲಡ್ಡು ಹೇಗೆ ಸೂಕ್ಷ್ಮ ವಿಷಯವಾಗಿದೆ ಎಂದು ಪ್ರಶ್ನಿಸಿದ ಅವರು, ಸನಾತನ ಧರ್ಮದ ವಿಷಯಕ್ಕೆ ಬಂದಾಗ ನೂರು ಬಾರಿ ಯೋಚಿಸಿ ಮಾತನಾಡಿ ಎಂದು ಪವನ್ ಕಲ್ಯಾಣ್ ಕಾರ್ತಿಗೆ ಎಚ್ಚರಿಕೆ ನೀಡಿದ್ದಾರೆ.
ಪ್ರಬುದ್ಧತೆಯಿಂದ ನಡೆದುಕೊಂಡ ನಟ ಕಾರ್ತಿ!
ಅಂದ ಹಾಗೆ, ಪವನ್ ಕಲ್ಯಾಣ್ ಗಿಂತಲೂ ದೊಡ್ಡ ಫ್ಯಾನ್ಸ್ ಫಾಲೋವರ್ಸ್ ಕಾರ್ತಿಗೆ ಇದೆ. ಭಾರತದಾದ್ಯಂತ ಕಾರ್ತಿ ಜನಪ್ರಿಯತೆ ಪಡೆದ ನಟ ಕೂಡ ಆಗಿದ್ದಾರೆ. ಆದರೂ ಹಿರಿಯ ನಟ ತನ್ನ ವಿರುದ್ಧ ಮಾತನಾಡಿದ ವೇಳೆ ಅತ್ಯಂತ ವಿನಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾರ್ತಿ, ಪ್ರೀತಿಯ ಪವನ್ ಕಲ್ಯಾಣ್ ಅವರೇ, ನಿಮ್ಮ ಬಗ್ಗೆ ತುಂಬಾ ಗೌರವವಿದೆ. ಉದ್ದೇಶ ಪೂರ್ವಕವಲ್ಲದೇ ನಡೆದ ಈ ಘಟನೆಗೆ ಕ್ಷಮೆಯಾಚಿಸುತ್ತೇನೆ. ನಾನು ವೆಂಕಟೇಶ್ವರನ ಭಕ್ತನಾಗಿ ಸಂಪ್ರದಾಯವನ್ನು ಪಾಲಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಲಡ್ಡು ವಿಚಾರದಲ್ಲಿ ಪ್ರಚಾರ ತಗೊಂಡ್ರಾ ಪವನ್ ಕಲ್ಯಾಣ್:
ತಿರುಪತಿ ತಿಮ್ಮಪ್ಪನ ಲಡ್ಡು ವಿಚಾರದಲ್ಲಿ ಈಗಾಗಲೇ ಸಾಕಷ್ಟು ಹೇಳಿಕೆಯನ್ನ ಪವನ್ ಕಲ್ಯಾಣ್ ನೀಡಿದ್ದಾರೆ. ಲಡ್ಡು ಪ್ರಸಾದ ಅಪವಿತ್ರಗೊಂಡಿರೋದಕ್ಕೆ ನಾನು ವೃತ ಕೈಗೊಳ್ಳುವುದಾಗಿಯೂ ಅವರು ಹೇಳಿಕೊಂಡಿದ್ದಾರೆ. ಆದ್ರೆ, ಲಡ್ಡು ವಿಚಾರದಲ್ಲಿ ಪವನ್ ಕಲ್ಯಾಣ್ ಹೆಚ್ಚಿನ ಪ್ರಚಾರ ತೆಗೆದುಕೊಳ್ಳಲು ಮುಂದಾಗಿದ್ದಾರಾ? ಈ ಮೂಲಕ ಆಂಧ್ರಪ್ರದೇಶದ ಮುಂದಿನ ಸಿಎಂ ರೇಸ್ ನಲ್ಲಿ ಪವನ್ ಕಲ್ಯಾಣ್ ಭಾಗಿಯಾಗ್ತಾರಾ? ಅನ್ನೋ ಅನುಮಾನಗಳು ಕೂಡ ಕೇಳಿ ಬಂದಿದೆ. ಒಟ್ಟಿನಲ್ಲಿ ಜನರ ನಂಬಿಕೆಯ ವಿಚಾರವನ್ನು ಯಾರು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎನ್ನುವುದು ತಿಳಿಯದೇ ಪರದಾಡುವ ಸ್ಥಿತಿ ಭಕ್ತರದ್ದಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: