ಮೋದಿ ಕಾಲದಲ್ಲಿ ಜೀವನಮಟ್ಟ ಸುಧಾರಿಸುವ ಕನಸನ್ನು ಜನರು ಕಳೆದುಕೊಂಡಿದ್ದಾರೆ: ಸರ್ವೇ ಬಹಿರಂಗ - Mahanayaka

ಮೋದಿ ಕಾಲದಲ್ಲಿ ಜೀವನಮಟ್ಟ ಸುಧಾರಿಸುವ ಕನಸನ್ನು ಜನರು ಕಳೆದುಕೊಂಡಿದ್ದಾರೆ: ಸರ್ವೇ ಬಹಿರಂಗ

31/01/2025


Provided by

ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರದ ಅಡಿಯಲ್ಲಿ ದೇಶದ ಜನರ ಜೀವನ ಮಟ್ಟವು ಉತ್ತಮಗೊಳ್ಳಬಹುದು ಅನ್ನುವ ನಿರೀಕ್ಷೆಯನ್ನು ಈ ದೇಶದ ಮಂದಿ ಬಹುತೇಕ ಕಳೆದುಕೊಳ್ಳುತ್ತಿದ್ದಾರೆ ಎಂದು ಸರ್ವೇ ತಿಳಿಸಿದೆ. ಜೀವನ ಮಟ್ಟ ಉತ್ತಮಗೊಳ್ಳದೆ ಇರುವುದು ಮತ್ತು ಜೀವನ ವೆಚ್ಚ ಅಧಿಕ ಗೊಳ್ಳುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿರುವ ಸರ್ವೆಯಲ್ಲಿ ಭಾಗವಹಿಸಿರುವ ಜನರು, ಮುಂದಿನ ದಿನಗಳಲ್ಲಿ ಜೀವನಮಟ್ಟ ಉತ್ತಮಗೊಳ್ಳಬಹುದು ಅನ್ನುವ ನೀರಿಕ್ಷೆಯನ್ನು ಕಳಕೊಂಡಿದ್ದಾರೆ. ಬಜೆಟ್ ಗೆ ಮುಂಚಿತವಾಗಿ ಸಿ ಓಟರ್ ಪೋಲಿಂಗ್ ಏಜೆನ್ಸಿ ನಡೆಸಿದ ಸರ್ವೆಯಲ್ಲಿ ಈ ಅಂಶ ಬಯಲಾಗಿದೆ.

ಈ ಸರ್ವೆಯಲ್ಲಿ ಭಾಗವಹಿಸಿದ 37 ಶೇಕಡ ಮಂದಿ ಕೂಡ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಜನಸಾಮಾನ್ಯರ ಬದುಕು ಮುಂದಿನ ವರ್ಷಗಳಲ್ಲಿ ಸಂಕಷ್ಟಮಯವಾಗಲಿದೆ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ. ವಿವಿಧ ರಾಜ್ಯಗಳಿಂದ ಆಯ್ಕೆ ಮಾಡಲಾದ 5269 ಮಂದಿ ಈ ಸರ್ವೇಯಲ್ಲಿ ಭಾಗವಹಿಸಿದ್ದರು. ಬೆಲೆ ಏರಿಕೆಯನ್ನು ತಡೆಯುವುದಕ್ಕೆ ಕೇಂದ್ರ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ ಮತ್ತು ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಬೆಲೆ ಏರಿಕೆಯಲ್ಲಿ ಹೆಚ್ಚಳವಷ್ಟೇ ಆಗಿದೆ ಎಂದು ಈ ಸರ್ವೆಯಲ್ಲಿ ಭಾಗವಹಿಸಿದ ಜನರು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ