ಕೆಲಸ ಹುಡುಕಿಕೊಂಡು ಗುಜರಾತ್ ನಿಂದ ಉಡುಪಿಗೆ ಬಂದಿದ್ದ ವ್ಯಕ್ತಿ ಸಾವು! - Mahanayaka

ಕೆಲಸ ಹುಡುಕಿಕೊಂಡು ಗುಜರಾತ್ ನಿಂದ ಉಡುಪಿಗೆ ಬಂದಿದ್ದ ವ್ಯಕ್ತಿ ಸಾವು!

death
30/11/2022


Provided by

ಕೆಲಸ ಹುಡುಕಿಕೊಂಡು ಉಡುಪಿಗೆ ಬಂದಿದ್ದ ಗುಜರಾತ್ ಮೂಲದ ವ್ಯಕ್ತಿಯೊಬ್ಬರು‌ ಅನಾರೋಗ್ಯದಿಂದ ಮೃತಪಟ್ಟ ಘಟನೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಮೃತರನ್ನು ಗುಜರಾತ್ ನ ನವಸಾರಿ ನಿವಾಸಿ 58ವರ್ಷದ ಬಲವಂತ ಬಾಯ್ ತಾಂಡೇಲ ಎಂದು ಗುರುತಿಸಲಾಗಿದೆ. ಇವರು ಹಾಗೂ ಇವರ ಮಗ ಮುಂಬೈನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದರು. ಹತ್ತು ದಿನಗಳ ಹಿಂದೆ ಊರಿಗೆ ಹೋಗುವುದಾಗಿ ಮುಂಬೈಯಿಂದ ಹೊರಟ್ಟಿದ್ದರು. ಆದರೆ, ತನ್ನ ಊರಾದ ಗುಜರಾತ್ ಗೆ ಹೋಗುವ ಬದಲು ಉಡುಪಿಯ ಮಲ್ಪೆಗೆ ಬಂದಿದ್ದರು ಎನ್ನಲಾಗಿದೆ.

ಮಲ್ಪೆಗೆ ಬಂದಿದ್ದ ಬಲವಂತ ಬಾಯ್, ವಸತಿ ಗೃಹವೊಂದರಲ್ಲಿ ತಂಗಿದ್ದರು. ನಾಲ್ಕು ದಿನಗಳ ಹಿಂದೆ ವಸತಿ ಗೃಹಕ್ಕೆ ಬಂದಿದ್ದ ಇವರು, ನ.26ರಂದು ವಸತಿ ಗೃಹದಿಂದ ಹೊರಗೆ ಬಾರದೇ ಇದ್ದುದ್ದರಿಂದ ಸಂಶಯಗೊಂಡ ಸಿಬ್ಬಂದಿ ಬಾಗಿಲು ಒಡೆದು ನೋಡಿದಾಗ ಚಿಂತಾಜನಕವಾಗಿ ನೆಲದಲ್ಲಿ ಅಸ್ವಸ್ಥರಾಗಿ ಬಿದ್ದಿದ್ದರು.

ಈ ಬಗ್ಗೆ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿಗೆ ಮಾಹಿತಿ‌ ನೀಡಿದ್ದು, ಅವರು ಕೂಡಲೇ ಸ್ಥಳಕ್ಕೆ ಬಂದು ಆ್ಯಂಬುಲೆನ್ಸ್ ನಲ್ಲಿ ವ್ಯಕ್ತಿಯನ್ನು ಉಡುಪಿ ಜಿಲ್ಲಾ ಆಸ್ಪತ್ರೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಲವಂತ ರಾಯ್ ನಿನ್ನೆ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ