ಕರ್ತವ್ಯ ಲೋಪದಿಂದ ಯುವಕ ಸಾವು ಪ್ರಕರಣ: ಐವರು ಪೊಲೀಸರು ಅಮಾನತು
ಚಾಮರಾಜನಗರ: ಜೀಪಿನಿಂದ ಹಾರಿ ಆರೋಪಿ ಯುವಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಐವರು ಪೊಲೀಸರು ಅಮಾನತುಗೊಂಡಿದ್ದಾರೆ.
ಯಳಂದೂರು ಸಿಪಿಐ ಶಿವಮಾದಯ್ಯ, ಪಿಎಸ್ಐ ಮಹದೇವಗೌಡ, ಎಎಸ್ ಐ ಚೆಲುವರಾಜ್, ಹೆಡ್ ಕಾನ್ಸ್’ಟೇಬಲ್ ಭದ್ರಮ್ಮ, ಕಾನ್ಸ್’ಟೇಬಲ್ ಸೋಮಶೇಖರ್ ಅಮಾನತುಗೊಂಡ ಪೊಲೀಸ್ ಸಿಬ್ಬಂದಿ. ಆರೋಪಿಯನ್ನು ಬಂಧಿಸಿ ಕರೆತರುವಾಗ ಕರ್ತವ್ಯಲೋಪ ಎಸಗಿದ್ದಾರೆಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಈ ಅಮಾನತು ಆದೇಶ ಹೊರಬಿದ್ದಿದೆ.
ಯಳಂದೂರು ತಾಲೂಕಿನ ಕುಂತೂರುಮೋಳೆ ಗ್ರಾಮದ ನಿಂಗರಾಜು(21) ಎಂಬಾತನ ವಿರುದ್ಧ ಅಪ್ರಾಪ್ತೆಯನ್ನು ಅಪಹರಿಸಿದ ದೂರು ದಾಖಲಾಗಿತ್ತು. ಮಂಗಳವಾರ ಆತನನ್ನು ಪೊಲೀಸರು ಠಾಣೆಗೆ ಕರೆದೊಯ್ಯವಾಗ ಪರಾರಿಯಾಗಲು ಜೀಪಿನಿಂದ ಲಿಂಗರಾಜು ಹಾರಿ ತೀವ್ರವಾಗಿ ಗಾಯಗೊಂಡಿದ್ದಾನೆ. ಬಳಿಕ, ಆಸ್ಪತ್ರೆಗೆ ರವಾನಿಸಲಾಯಿತರಾದರೂ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಅಮಾನತು ಆದೇಶಕ್ಕೆ ದಲಿತ ಸಂಘಟನೆಗಳು ಆಕ್ರೋಶಗೊಂಡು ಇಂದು ಪ್ರತಿಭಟನೆ ನಡೆಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka