ಅಕ್ರಮವಾಗಿ ನಾಡ ಬಂದೂಕು ಇಟ್ಟುಕೊಂಡಿದ್ದ ವ್ಯಕ್ತಿ ಬಂಧನ

26/03/2024
ಚಿಕ್ಕಮಗಳೂರು: ಅಕ್ರಮವಾಗಿ ಪರವಾನಗಿ ಇಲ್ಲದ ನಾಡ ಬಂದೂಕು ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿಯಲ್ಲಿ ನಡೆದಿದೆ.
ಬಣಕಲ್ ಹೋಬಳಿಯ ಬಸನಿ ಹೆಗ್ಗುಡ್ಲು ಗ್ರಾಮದ ಲೋಕೇಶ್ 41 ವರ್ಷದ ವ್ಯಕ್ತಿ ಮನೆಯಲ್ಲಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ನಾಡ ಬಂದೂಕು ಮತ್ತು ಚರೆಯನ್ನು ಇಟ್ಟುಕೊಂಡಿದ್ದ ಖಚಿತ ಮಾಹಿತಿ ಪಡೆದ ಬಣಕಲ್ ಪೊಲೀಸರು ದಾಳಿ ನಡೆಸಿ ಒಂಟಿ ನಳಿಕೆಯ ನಾಡ ಬಂದೂಕು ಹಾಗೂ 12 ಚರೆಯನ್ನು ವಶಪಡಿಸಿಕೊಂಡು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth