ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ  ಪೆಟ್ರೋಲ್ ಬಂಕ್ ಎದುರೇ  ಶಿವಸೇನೆ ಮಾಡಿದ್ದೇನು ಗೊತ್ತಾ? - Mahanayaka

ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ  ಪೆಟ್ರೋಲ್ ಬಂಕ್ ಎದುರೇ  ಶಿವಸೇನೆ ಮಾಡಿದ್ದೇನು ಗೊತ್ತಾ?

22/02/2021

ಮುಂಬೈ: ತೈಲ ಬೆಲೆ ಏರಿಕೆ ವಿರುದ್ಧ ಮುಂಬೈಯಲ್ಲಿ ಶಿವಸೇನೆ ಯುವ ಘಟಕ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಆರಂಭಿಸಿದ್ದು, ಪೆಟ್ರೋಲ್ ಬಂಕ್ ಗಳ  ಬಳಿಯಲ್ಲಿ ಇದೇ ನೋಡಿ ಅಚ್ಛೇದಿನ್ ಎಂದು ಬ್ಯಾನರ್ ಹಾಕಿ ಪ್ರತಿಭಟನೆ ನಡೆಸುತ್ತಿದೆ.

ಗ್ಯಾಸ್, ಪೆಟ್ರೋಲ್, ಡಿಸೇಲ್ ಗಳ ಬೆಲೆಯಲ್ಲಿ ವಿವಿಧ ವರ್ಷಗಳಲ್ಲಿ ಎಷ್ಟು ರೇಟು ಇತ್ತು. ಇದು ಈಗ ಎಷ್ಟಾಗಿದೆ  ಎಂಬ ಪಟ್ಟಿಯನ್ನು ಹಾಕಿದ್ದಲ್ಲದೇ ‘ಇದೇ ನೋಡಿ ಅಚ್ಚೇದಿನ್’ ಎಂದು ಬಿಜೆಪಿಯ ವಿರುದ್ಧ ಬ್ಯಾನರ್ ನಲ್ಲಿ ಬರೆಯಲಾಗಿದೆ.

ಕಳೆದ ಹಲವು ದಿನಗಳಿಂದ ತೈಲ ದರ ಏರುತ್ತಲೇ ಇದೆ. ಕೆಲವು ನಗರಗಳಲ್ಲ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 100 ರೂ ತಲುಪಿದೆ.  ದೇಶಾದ್ಯಂತ ಇದರ ವಿರುದ್ಧ ವ್ಯಾಪಕ ಆಕ್ರೋಶಗಳು ಕೇಳಿ ಬರುತ್ತಿದೆ. ಇದೇ ಸಂದರ್ಭದಲ್ಲಿ ಶಿವಸೇನೆ ಮುಂಬೈಯಲ್ಲಿ ವಿಭಿನ್ನ ಪ್ರತಿಭಟನೆಯಲ್ಲಿ  ತೊಡಗಿದೆ.

ಇತ್ತೀಚಿನ ಸುದ್ದಿ