ಪೆಟ್ರೋಲ್ ಬೆಲೆ ಏರಿಕೆ ‘ಐತಿಹಾಸಿಕ ಶೋಷಣೆ’ ಎಂದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ - Mahanayaka

ಪೆಟ್ರೋಲ್ ಬೆಲೆ ಏರಿಕೆ ‘ಐತಿಹಾಸಿಕ ಶೋಷಣೆ’ ಎಂದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ

08/12/2020

ನವದೆಹಲಿ: ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಮಾಡಿರುವುದು ಐತಿಹಾಸಿಕ ಶೋಷಣೆ ಎಂದು ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ  ಕೇಂದ್ರ ಸರ್ಕಾರದ ವಿರುದ್ಧ ಟ್ವೀಟ್ ದಾಳಿ ನಡೆಸಿದ್ದಾರೆ.

ಸಂಸ್ಕರಣೆಗೊಂಡ ಬಳಿ ಪೆಟ್ರೋಲ್  ಪ್ರತಿ ಲೀಟರ್ ಗೆ 30ರೂ.ನಷ್ಟು ಬೆಲೆಗೆ ಸಿಗುತ್ತದೆ.  ಎಲ್ಲ ತೆರಿಗೆಗಳು ಸೇರಿದ ಬಳಿ ಇದರ ಬೆಲೆ 60 ರೂಪಾಯಿಗಳಷ್ಟಾಗುತ್ತದೆ. ನನ್ನ ಪ್ರಕಾರ ಪೆಟ್ರೋಲ್ ನ್ನು ಪ್ರತಿ ಲೀಟರ್ ಗೆ  40 ರೂಪಾಯಿಗಳಂತೆ ಮಾರಾಟ ಮಾಡಬೇಕು ಎಂದು ಅವರು ಟ್ವೀಟ್ ನಲ್ಲಿ ಹೇಳಿದ್ದಾರೆ.

ಪೆಟ್ರೋಲ್ ಬೆಲೆಯಲ್ಲಿ ನಿರಂತರ ಏರಿಕೆಯ ಹಿನ್ನೆಲೆಯಲ್ಲಿ ಸುಬ್ರಮಣಿಯನ್ ಸ್ವಾಮಿ ಈ ಟ್ವೀಟ್ ಮಾಡಿದ್ದು, ಸೋಮವಾರದವರೆಗೆ ಸತತ 6 ದಿಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದೆ.

ಇತ್ತೀಚಿನ ಸುದ್ದಿ