ಭಾಷಣ ಮಾಡುತ್ತಿದ್ದಾಗ ಕೈಕೊಟ್ಟ ಟೆಲಿ ಪ್ರಾಂಪ್ಟರ್: ಪ್ರಧಾನಿ ಮೋದಿಗೆ ತೀವ್ರ ಮುಜುಗರ - Mahanayaka

ಭಾಷಣ ಮಾಡುತ್ತಿದ್ದಾಗ ಕೈಕೊಟ್ಟ ಟೆಲಿ ಪ್ರಾಂಪ್ಟರ್: ಪ್ರಧಾನಿ ಮೋದಿಗೆ ತೀವ್ರ ಮುಜುಗರ

06/01/2025


Provided by

ಭಾಷಣ ಮಾಡುತ್ತಿದ್ದಾಗ ಟೆಲಿ ಪ್ರಾಂಪ್ಟರ್ ಕೈಕೊಟ್ಟು ಪ್ರಧಾನಿ ನರೇಂದ್ರ ಮೋದಿ ಮುಜುಗರಕ್ಕೆ ಒಳಗಾದ ಪ್ರಸಂಗ ನಡೆದಿದೆ. ಇದನ್ನು ಎಎಪಿ ಸಹಿತ ಪ್ರತಿಪಕ್ಷಗಳು ವ್ಯಂಗ್ಯವಾಡಿವೆ. ದೆಹಲಿಯ ರೋಹಿಣಿಯಲ್ಲಿ ಈ ಘಟನೆ ನಡೆದಿದ್ದು ಪ್ರಾಂಪ್ಟರ್ ಕೈಕೊಟ್ಟ ಕಾರಣ ಪ್ರಧಾನಿ ಮೋದಿ ಏನನ್ನು ಮಾತಾಡದೆ ಸುಮ್ಮನಿದ್ದ ವಿಡಿಯೋ ವೈರಲ್ ಆಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಭಾರಿ ಆವೇಶದಿಂದ ಭಾಷಣ ಮಾಡುತ್ತಿದ್ದಾಗ ತಕ್ಷಣ ಪ್ರಾಂಪ್ಟರ್ ಕೈಕೊಟ್ಟಿತು. ಆ ಕಾರಣದಿಂದಾಗಿ ಅವರು ಭಾಷಣ ನಿಲ್ಲಿಸಿದರು. ಹಲವು ನಿಮಿಷಗಳ ಕಾಲ ಅವರೇನೂ ಮಾತಾಡಲಿಲ್ಲ. ಭಾಷಣವನ್ನು ಆರಂಭಿಸುವುದಕ್ಕಾಗಿ ಟೆಲಿಪ್ರಾ0ಪ್ಟರ್ ಅನ್ನು ಕಾಯುತ್ತ ನಿಂತ ಪ್ರಧಾನಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿದೆ.

ಇದೇ ವೇಳೆ ದೆಹಲಿಯ ಬಿಜೆಪಿಯಂತೆಯೇ ಪ್ರಧಾನಿಯ ಪ್ರಾಂಪ್ಟರ್ ಕೂಡ ಸೋಲೊಪ್ಪಿ ಕೊಂಡಿದೆ ಎಂದು ಎಎಪಿ ವ್ಯಂಗ್ಯವಾಡಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ