ಎಚ್ಚರ ಎಚ್ಚರ: ರೋಗ, ಸಾವು ತರಬಹುದು ಏಕಾಂತತೆ, ಒಂಟಿತನ! - Mahanayaka
6:50 AM Thursday 23 - January 2025

ಎಚ್ಚರ ಎಚ್ಚರ: ರೋಗ, ಸಾವು ತರಬಹುದು ಏಕಾಂತತೆ, ಒಂಟಿತನ!

06/01/2025

ಏಕಾಂತತೆ ಮತ್ತು ಒಂಟಿತನವು ವಿವಿಧ ರೋಗಗಳಿಗೆ ಕಾರಣವಾಗಬಹುದು ಮತ್ತು ಅದು ಸಾವಿನವರೆಗೂ ಕೊಂಡೊಯ್ಯಬಹುದು ಎಂದು ಸಂಶೋಧನೆಯೊಂದು ಹೇಳಿದೆ. ಕೇಂಬ್ರಿಜ್ ವಿಶ್ವವಿದ್ಯಾಲಯ ಮತ್ತು ಚೀನಾದ ಪುಡಾನ್ ವಿಶ್ವವಿದ್ಯಾಲಯವು ಜಂಟಿಯಾಗಿ ನಡೆಸಿದ ಸಂಶೋಧನೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.

ಈ ಕುರಿತಾದ ಸಂಶೋಧನಾ ವರದಿಯನ್ನು ನೇಚರ್ ಹ್ಯೂಮನ್ ಬಿಹೇವಿಯರ್ ಜರ್ನಲ್ಸ್ ಪ್ರಕಟಿಸಿದೆ. ಶಾಂತಿ, ಮಾನಸಿಕ ನೆಮ್ಮದಿಗಾಗಿ ಮಾತ್ರವಲ್ಲ ದೈಹಿಕ ಆರೋಗ್ಯಕ್ಕೂ ಇತರರೊಂದಿಗೆ ಸಂಬಂಧವನ್ನು ಬೆಳೆಸುವುದು ಬಹಳ ಅಗತ್ಯ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಈ ಸಂಶೋಧನೆಗಾಗಿ 40 ವರ್ಷದಿಂದ 69 ವರ್ಷದ ಒಳಗಿನ 42,000 ಜನರ ಬದುಕಿನ ಮಾಹಿತಿಯನ್ನ ಬಳಸಿಕೊಳ್ಳಲಾಗಿದೆ. 1 ಲಕ್ಷಕ್ಕಿಂತಲೂ ಅಧಿಕ ಪ್ರೋಟೀನ್ ಗಳು ಮತ್ತು ಅವುಗಳಿಗೆ ಸಂಬಂಧಿಸಿದ ಹಲವು ವಿಧಗಳು ಮನುಷ್ಯನ ದೇಹದಲ್ಲಿದೆ. ಸ್ವಯಂ ಒಂಟಿತನದ ಕಾರಣದಿಂದಾಗಿ ಮತ್ತು ಸಾಮಾಜಿಕವಾಗಿ ಯಾರೊಂದಿಗೂ ಸೇರದೆ ಉಂಟಾಗುವ ಒಂಟಿತನದಿಂದಾಗಿ ಇವುಗಳಲ್ಲಿ ಆಗುವ ವ್ಯತ್ಯಾಸವನ್ನು ಕೂಡ ಸಂಶೋಧಕರು ಪರಿಶೀಲಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ