ಮೋದಿ ಭಾರತ ಮಾತೆಗೆ ಅವಮಾನ ಮಾಡಿದ್ದಾರೆ: ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಕಿಡಿ

ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ. ಭಾರತದ ಗಡಿಭಾಗವನ್ನು ಚೀನಾ ವಶಪಡಿಸಿಕೊಂಡಿರುವುದಕ್ಕೆ ಅವರು ಮೌನವಾಗಿದ್ದಾರೆ ಮತ್ತು ಭಾರತ ಮಾತೆಯನ್ನು ನರೇಂದ್ರ ಮೋದಿ ವಂಚಿಸುತ್ತಿದ್ದಾರೆ ಎಂದು ಸುಬ್ರಮಣ್ಯಂ ಸ್ವಾಮಿ ಆರೋಪಿಸಿದ್ದಾರೆ.
ಚೀನಾದ ಎದುರು ತಲೆಬಾಗಿಸಿರುವ ಮೋದಿ ಭಾರತ ಮಾತೆಗೆ ಅವಮಾನಿಸಿದ್ದಾರೆ. 2020 ರ ನಂತರ 4065 ಚದರ ಕಿಲೋಮೀಟರ್ ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಿದ್ದು ಇಷ್ಟು ಬೃಹತ್ ಭೂಮಿ ಭಾರತಕ್ಕೆ ನಷ್ಟವಾಗಿದೆ. ಬಿಜೆಪಿಯು ನರೇಂದ್ರ ಮೋದಿ ಅವರನ್ನು ದೂರವಿಟ್ಟು ಚುನಾವಣೆಯಲ್ಲಿ ಬಹುಮತವನ್ನು ಗಳಿಸಲು ಪ್ರಯತ್ನಿಸಬೇಕು. ಪಕ್ಷದ ವಿಶ್ವಾಸಾರ್ಹತೆಗೆ ಮೋದಿ ಒಂದು ತಡೆಯಾಗಿದ್ದಾರೆ ಎಂದು ಸುಬ್ರಹ್ಮಣ್ಯಂ ಸ್ವಾಮಿ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth