ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನ: ಪ್ರಧಾನಿ ಕೆಲಸವನ್ನು ಮಾಡೋರು ಯಾರು..? ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ - Mahanayaka

ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನ: ಪ್ರಧಾನಿ ಕೆಲಸವನ್ನು ಮಾಡೋರು ಯಾರು..? ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ

31/05/2024

ಪ್ರಧಾನಿ ನರೇಂದ್ರ ಮೋದಿಯವರು ಕನ್ಯಾಕುಮಾರಿಯಲ್ಲಿ ಧ್ಯಾನಸಕ್ತರಾಗಿರುವ ಅವಧಿಯಲ್ಲಿ ಅವರ ಹೊಣೆಗಾರಿಕೆಯನ್ನು ಯಾರು ನಿರ್ವಹಿಸುತ್ತಾರೆ ಅನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿದೆ. 2019 ರ ಚುನಾವಣೆಯ ಕೊನೆಯ ಹಂತದಲ್ಲಿ ಅವರು ಉತ್ತರಖಂಡದಲ್ಲಿ ಧ್ಯಾನಾಸಕ್ತರಾಗಿದ್ದರು. ಆದರೆ ಅದು 17 ದಿನಗಳವರೆಗೆ ಮಾತ್ರ. ಆದರೆ ಈ ಬಾರಿ ಮೂರು ದಿನಗಳ ಅವಧಿಯದ್ದಾಗಿರುವುದರಿಂದ ಪ್ರಧಾನಿಯ ಹೊಣೆಗಾರಿಕೆಯನ್ನು ಯಾರು ನಿರ್ವಹಿಸುತ್ತಾರೆ ಎನ್ನುವ ಪ್ರಶ್ನೆ ಚರ್ಚೆಗೆ ಒಳಗಾಗಿದೆ.


Provided by

ಆದರೆ ಈ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲು ಬಿಜೆಪಿ ವಿಫಲವಾಗಿದೆ. 2014ರಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿಯವರು ಈವರೆಗೆ ಉಪ ಪ್ರಧಾನಿಯನ್ನು ನೇಮಿಸಿಲ್ಲ. ಕೇಂದ್ರ ಸಚಿವರ ಲಿಸ್ಟ್ ನ ಪ್ರಕಾರ ಪ್ರಧಾನಿ ಮೋದಿ ಅವರ ನಂತರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬರುತ್ತಾರೆ. 2019ರಲ್ಲಿ ಚುನಾವಣೆಯ ಕೊನೆಯಲ್ಲಿ ಮೋದಿ ಉತ್ತರಾಖಂಡದಲ್ಲಿ ಧ್ಯಾನಾಸಕ್ತರಾಗಿದ್ದರು.. ಆಗಲು ಕೂಡ ಅವರು ಹೊಣೆಗಾರಿಕೆಯನ್ನು ಇತರರಿಗೆ ವಹಿಸಿರಲಿಲ್ಲ ಮತ್ತು ಯಾರಿಗೆ ವಹಿಸಿದ್ದೀರಿ ಎಂಬ ಪ್ರಶ್ನೆಗೆ ಉತ್ತರವನ್ನು ನೀಡಿರಲಿಲ್ಲ. ಇದೀಗ ಅದೇ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ.

 


Provided by

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ