'ನೀವು ಭಾರತದ ಪ್ರಬಲ ಬ್ರಾಂಡ್ ಅಂಬಾಸಿಡರ್': ಅಮೆರಿಕದಲ್ಲಿರುವ ಭಾರತೀಯರಿಗೆ ಪ್ರಧಾನಿ ಮೋದಿ ಕರೆ - Mahanayaka

‘ನೀವು ಭಾರತದ ಪ್ರಬಲ ಬ್ರಾಂಡ್ ಅಂಬಾಸಿಡರ್’: ಅಮೆರಿಕದಲ್ಲಿರುವ ಭಾರತೀಯರಿಗೆ ಪ್ರಧಾನಿ ಮೋದಿ ಕರೆ

23/09/2024


Provided by

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತೀಯ ಸಮುದಾಯದ ಕೊಡುಗೆಗಳನ್ನು ಶ್ಲಾಘಿಸಿ ಅವರನ್ನು ‘ರಾಷ್ಟ್ರದೂತ’ರು ಅಥವಾ ಭಾರತದ ಬ್ರಾಂಡ್ ರಾಯಭಾರಿಗಳು ಎಂದು ಕರೆದಿದ್ದಾರೆ.

ತಮ್ಮ ಮೂರು ದಿನಗಳ ಪ್ರವಾಸದ ಭಾಗವಾಗಿ ನ್ಯೂಯಾರ್ಕ್ ನ ಲಾಂಗ್ ಐಲ್ಯಾಂಡ್ ನಲ್ಲಿರುವ ನಸ್ಸೌ ಕೊಲಿಸಿಯಂನಲ್ಲಿ ನಡೆದ ‘ಮೋದಿ ಮತ್ತು ಯುಎಸ್’ ಕಾರ್ಯಕ್ರಮದಲ್ಲಿ ಭಾರತೀಯ-ಅಮೆರಿಕನ್ನರನ್ನು ಉದ್ದೇಶಿಸಿ ಅವರು ಈ ಹೇಳಿಕೆ ನೀಡಿದ್ದಾರೆ.

“ನಾನು ಯಾವಾಗಲೂ ಭಾರತೀಯ ಸಮುದಾಯದ ಸಾಮರ್ಥ್ಯಗಳನ್ನು ಅರ್ಥಮಾಡಿಕೊಂಡಿದ್ದೇನೆ. ನಾನು ಯಾವುದೇ ಅಧಿಕೃತ ಸ್ಥಾನವನ್ನು ಹೊಂದಿರದಿದ್ದರೂ ಸಹ ಅದನ್ನು ಅರ್ಥಮಾಡಿಕೊಂಡಿದ್ದೇನೆ. ನನಗೆ ನೀವೆಲ್ಲರೂ ಭಾರತದ ಪ್ರಬಲ ಬ್ರಾಂಡ್ ರಾಯಭಾರಿಗಳಾಗಿದ್ದೀರಿ. ಅದಕ್ಕಾಗಿಯೇ ನಾನು ನಿಮ್ಮನ್ನು ‘ರಾಷ್ಟ್ರದೂತರೆಂದು’ ಕರೆಯುತ್ತೇನೆ ಎಂದು ಅವರು ಸ್ಥಳದಲ್ಲಿದ್ದ ಸುಮಾರು 13,000 ಜನರ ಗುಂಪಿಗೆ ಹೇಳಿದರು.

“ನಾವು ಡಜನ್ ಗಟ್ಟಲೆ ಭಾಷೆಗಳು ಮತ್ತು ಸಂಭಾಷಣೆಗಳು, ವಿಶ್ವದ ಎಲ್ಲಾ ನಂಬಿಕೆಗಳು ಮತ್ತು ಧರ್ಮಗಳಿರುವ ದೇಶಕ್ಕೆ ಸೇರಿದವರಾಗಿದ್ದೇವೆ ಮತ್ತು ಆದರೂ ನಾವು ಒಗ್ಗಟ್ಟಾಗಿ ಮುಂದುವರಿಯುತ್ತಿದ್ದೇವೆ” ಎಂದು ಅವರು ಹೇಳಿದರು.
ಈ ವರ್ಷದ ಆರಂಭದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಸತತ ಮೂರನೇ ಬಾರಿಗೆ ಐತಿಹಾಸಿಕ ಗೆಲುವು ಸಾಧಿಸಿರುವುದನ್ನು ಪ್ರಧಾನಿ ಮೋದಿ ಉಲ್ಲೇಖಿಸಿದರು.

ಸೆಪ್ಟೆಂಬರ್ 21ರಂದು ಆರಂಭವಾದ ಅಮೆರಿಕಕ್ಕೆ ಮೂರು ದಿನಗಳ ಭೇಟಿಯ ಎರಡನೇ ದಿನವಾದ ನ್ಯೂಯಾರ್ಕ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ