ಸೆಪ್ಟೆಂಬರ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿವೃತ್ತಿ? ಶಿವಸೇನೆಯ ಸಂಜಯ್ ರಾವತ್ ಮಾತು ನಿಜನಾ?

ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ ನಲ್ಲಿ ನಿವೃತ್ತರಾಗೋಕೇ ಯೋಜಿಸುತ್ತಿದ್ದಾರೆ ಮತ್ತು ನಾಗ್ಪುರದ ಆರ್ ಎಸ್ಎಸ್ ಪ್ರಧಾನ ಕಚೇರಿಗೆ ಅವರು ಇತ್ತೀಚೆಗೆ ಭೇಟಿ ನೀಡಿದ್ದಕ್ಕೂ ಅದಕ್ಕೂ ಸಂಬಂಧವಿದೆ ಎಂದು ಶಿವಸೇನೆ (ಯುಬಿಟಿ) ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ. ಕಳೆದ 10-11 ವರ್ಷಗಳಲ್ಲಿ ಪ್ರಧಾನಿ ಮೋದಿ ಆರ್ ಎಸ್ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡಿಲ್ಲ. ಆದರೆ ಈಗ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ “ಟಾಟಾ, ಬೈ, ಬೈ” ಹೇಳಲು ಹಾಗೆ ಮಾಡಿದ್ದಾರೆ ಎಂದು ರಾವತ್ ಹೇಳಿದ್ದಾರೆ.
ಸೆಪ್ಟೆಂಬರ್ ನಲ್ಲಿ ನಿವೃತ್ತಿಯ ಅರ್ಜಿ ಸಲ್ಲಿಸಬಹುದು (ಅವರು ತಮ್ಮ ನಿವೃತ್ತಿ ಅರ್ಜಿಯನ್ನು ಸಲ್ಲಿಸಲು ಆರ್ ಎಸ್ ಎಸ್ ಪ್ರಧಾನ ಕಚೇರಿಗೆ ಹೋಗಿರಬಹುದು) ಎಂದು ರಾವತ್ ಹೇಳಿದ್ದಾರೆ.
ದೇಶದ ನಾಯಕತ್ವದಲ್ಲಿ ಬದಲಾವಣೆಯನ್ನು ಆರ್ ಎಸ್ ಎಸ್ ಬಯಸುತ್ತದೆ ಎಂದು ಅವರು ನಂಬುತ್ತಾರೆ ಎಂದರು.
‘ನನಗೆ ತಿಳಿದಿರುವಂತೆ ಇಡೀ ಸಂಘ ಪರಿವಾರವು ದೇಶದ ನಾಯಕತ್ವದಲ್ಲಿ ಬದಲಾವಣೆಯನ್ನು ಬಯಸುತ್ತದೆ. ಪ್ರಧಾನಿ ಮೋದಿಯವರ ಸಮಯ ಮುಗಿದಿದೆ ಮತ್ತು ಅವರು ಬದಲಾವಣೆಯನ್ನು ಬಯಸುತ್ತಾರೆ ಮತ್ತು ಅವರು ಮುಂದಿನ ಬಿಜೆಪಿ ಮುಖ್ಯಸ್ಥರನ್ನು ಆಯ್ಕೆ ಮಾಡಲು ಬಯಸುತ್ತಾರೆ” ಎಂದು ರೌತ್ ಮುಂಬೈನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj