ಯಡಿಯೂರಪ್ಪ ವಿರುದ್ಧ  ಪೋಕ್ಸೋ ಕೇಸ್  ರಾಜಕೀಯ ಪಿತೂರಿ: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ - Mahanayaka

ಯಡಿಯೂರಪ್ಪ ವಿರುದ್ಧ  ಪೋಕ್ಸೋ ಕೇಸ್  ರಾಜಕೀಯ ಪಿತೂರಿ: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

basavaraj bommai
15/06/2024


Provided by

ಹಾವೇರಿ: ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್ ಪ್ರಕರಣ ಇದೊಂದು ರಾಜಕೀಯ ಪಿತೂರಿ, ಖಂಡಿತವಾಗಿಯೂ ಷಡ್ಯಂತ್ರ ಎಂದು ಹಾವೇರಿ ಸಂಸದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು,  ಅದು ಸಂಪೂರ್ಣ ಕೇಸ್ ಪಾಲೋ ಮಾಡಿದರೆ, ಅದರ ಹಿನ್ನಲೆ ನೋಡಿದರೆ ಷಡ್ಯಂತ್ರ ಇದೆ.  ಮೂರು ತಿಂಗಳ ಬಿಟ್ಟು, ಈಗ ಒಂದೇ ದಿನಕ್ಕೆ ಸಮಯ ಕೊಟ್ಟು, ವಾರಂಟ್ ನೀಡೋದು ಬಹಳಷ್ಟು ಲ್ಯಾಪನ್ಸ್ ಇದೆ. ಇದು ಹೈಕೋರ್ಟ್ ನಲ್ಲಿ ಕೇಸ್ ಇದೆ. ಆದರಿಂದ ನಮಗೆ ವಿಶ್ವಾಸ ಇದೆ.  ಯಡಿಯೂರಪ್ಪ ನ್ಯಾಯ ಸಿಗುತ್ತದೆ. ಹಿಂದೆ ಕೂಡಾ ಹಲವಾರು ಕೇಸ್ ಗಳ ಹಾಕಿದ್ದರು.  ಆ ಎಲ್ಲಾ ಕೇಸ್ ಗಳಲ್ಲಿ ಸುಪ್ರೀಂ ಕೋರ್ಟ್ ಹೋಗಿ ಗೆದ್ದುಕೊಂಡು ಬಂದಿದ್ದಾರೆ. ಅವೆಲ್ಲಾ ಸುಳ್ಳು ಕೇಸ್ ಗಳು ಅನ್ನೋದು ಗೊತ್ತಾಗಿದೆ ಎಂದು ಅವರು ಹೇಳಿದರು.

ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸುವವರೆಗೂ ಕೇಸ್ ಮಾಡಿದ್ದರು. ಬಹುತೇಕ ರಾಷ್ಟ್ರದಲ್ಲಿ ರಾಜಕಾರಣದಲ್ಲಿ ರಾಜಕಾರಣಿಗೆ ಕೇಸ್ ಹಾಕಿ ಕಟ್ಟಿ ಹಾಕುವ  ಪ್ರಯತ್ನ ಮಾಡಿದ್ದಾರೆ.  ನಮಗೆ ವಿಶ್ವಾಸ ಇದೆ. ಈ ಪ್ರಕರಣದಲ್ಲಿ ಸಹ ಯಡಿಯೂರಪ್ಪ ನ್ಯಾಯ ಸಿಗುತ್ತದೆ ಎಂದು ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ