ಸಂಚಾರಿ ಪೊಲೀಸರ ತಪಾಸಣೆ ವೇಳೆ ಅವಗಢ ತಪ್ಪಿಸಲು ಮುಂದಾದ ಪೊಲೀಸ್ ಇಲಾಖೆ - Mahanayaka

ಸಂಚಾರಿ ಪೊಲೀಸರ ತಪಾಸಣೆ ವೇಳೆ ಅವಗಢ ತಪ್ಪಿಸಲು ಮುಂದಾದ ಪೊಲೀಸ್ ಇಲಾಖೆ

traffic police
31/05/2025

ಬೆಂಗಳೂರು: ಸಂಚಾರಿ ಪೊಲೀಸರ ತಪಾಸಣೆ ವೇಳೆ ಅವಘಡಗಳನ್ನು ತಪ್ಪಿಸುವ ಹಿನ್ನೆಲೆ ರಾಜ್ಯದ ಎರಡನೇ ಹಂತದ ನಗರಗಳು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್​ಮೆಂಟ್ ಸಿಸ್ಟಂ (ಐಟಿಎಂಎಸ್) ಜಾರಿಗೆ ತರಲು ರಾಜ್ಯ ಪೊಲೀಸ್ ಇಲಾಖೆ ಮುಂದಾಗಿದೆ. ಈ ಮೂಲಕ ಸಾರ್ವಜನಿಕರೊಂದಿಗೆ ಪೊಲೀಸ್ ಸಿಬ್ಬಂದಿಯ ಅತಿರೇಕದ ವರ್ತನೆಗಳಿಗೆ ಮುಕ್ತಿ ಹಾಡಲು ಪೊಲೀಸ್​ ಇಲಾಖೆ ತೀರ್ಮಾನಿಸಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಆರು ಕಮಿಷನರೇಟ್ ವ್ಯಾಪ್ತಿಗಳಲ್ಲಿ ಐಟಿಎಂಎಸ್ ಚಾಲ್ತಿಯಲ್ಲಿದೆ. ಇನ್ನಿತರ ಜಿಲ್ಲೆಗಳಲ್ಲಿ ಸಂಚಾರ ಪೊಲೀಸರೇ ವಾಹನ ತಪಾಸಣೆ ಮಾಡಿ, ನಿಯಮ ಉಲ್ಲಂಘಿಸುವ ಸವಾರರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಿ ಜೊತೆಗೆ ಸಂಚಾರ ನಿರ್ವಹಣೆ ಮಾಡುತ್ತಿದ್ದಾರೆ

ಐಟಿಎಂಎಸ್ ವ್ಯವಸ್ಥೆಯಲ್ಲಿ ನಗರ ಹಾಗೂ ಪಟ್ಟಣ ಸೇರಿದಂತೆ ಇನ್ನಿತರ ಪ್ರಮುಖ ಜಂಕ್ಷನ್​ಗಳಲ್ಲಿ ಕ್ಯಾಮರಾ ಅಳವಡಿಕೆ ಮಾಡಲಾಗುವುದು. ಸಂಚಾರ ನಿಯಮ ಉಲ್ಲಂಘನೆ ಕಂಡುಬಂದರೆ ಕೃತಕ ಬುದ್ಧಿಮತ್ತೆಯ (ಎಐ) ಆಟೊಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ (ಎಎನ್‍ಪಿಆರ್) ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ. ಈ ಅತ್ಯಾಧುನಿಕ ಕ್ಯಾಮರಾಗಳ ನೆರವಿನಿಂದ ಟ್ರಾಫಿಕ್ ಉಲ್ಲಂಘನೆ ಪತ್ತೆ ಹಚ್ಚುವುದರ ಜೊತೆಗೆ ದಂಡದ ಮಾಹಿತಿಯು ಸಿಗಲಿದೆ.


Provided by

ಎಎನ್​ ಪಿಆರ್ ಮೂಲಕ ವಾಹನ ಸವಾರರು ನಿಯಮ ಉಲ್ಲಂಘಿಸಿದ ಬಗ್ಗೆ ಸೆರೆಹಿಡಿದ ಫೋಟೋಗಳು ಸ್ವಯಂಚಾಲಿತವಾಗಿ ತಂತ್ರಜ್ಞಾನ ನೆರವಿನಿಂದ ಸಂಚಾರ ನಿರ್ವಹಣಾ ಕೇಂದ್ರಕ್ಕೆ (ಟಿಎಂಸಿ) ರವಾನೆಯಾಗುತ್ತವೆ. ವಾಹನ ನೋಂದಣಿ ಸಂಖ್ಯೆಯ ಸಮೇತ ಫೋಟೋಗಳನ್ನು ಟಿಎಂಸಿಗೆ ಕಳುಹಿಸುತ್ತದೆ. ಸಂಚಾರ ನಿಯಮ ಉಲ್ಲಂಘನೆಯ ದಂಡ ಬಾಕಿಯಿರುವ ವಾಹನಗಳು ಎಎನ್‍ ಪಿಆರ್ ಕ್ಯಾಮರಾ ಅಳವಡಿಕೆಯಾಗಿರುವ ಜಂಕ್ಷನ್ ಮೂಲಕ ಹಾದು ಹೋದಾಗ ಕ್ಯಾಮರಾಗಳು, ಆ ವಾಹನಗಳು ಹಾಗೂ ವಾಹನ ಸವಾರನ ಸಂಪೂರ್ಣ ವಿವರವನ್ನು ಹತ್ತಿರದಲ್ಲಿರುವ ಪೊಲೀಸರಿಗೆ ವರ್ಗಾಯಿಸುತ್ತವೆ. ಆಗ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಅಂತಹ ವಾಹನ ಸವಾರನನ್ನು ತಡೆದು ದಂಡ ವಸೂಲಿ ಮಾಡಬಹುದಾಗಿದೆ.

ಹೆಲ್ಮೆಟ್ ರಹಿತ ವಾಹನ ಚಾಲನೆ, ನೋ ಎಂಟ್ರಿ, ವೇಗದ ಮಿತಿ ಉಲ್ಲಂಘನೆ, ಚಾಲನೆ ವೇಳೆ ಮೊಬೈಲ್ ಬಳಕೆ, ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲನೆ ಹಾಗೂ ಸಿಗ್ನಲ್ ಜಂಪ್ ಸೇರಿದಂತೆ ನಾನಾ ರೀತಿಯ ಸಂಚಾರ ನಿಯಮಗಳ ಬಗ್ಗೆ ಎಎನ್‍ಪಿಆರ್ ಹದ್ದಿನ ಕಣ್ಣಿಡಲಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ