ಮಂಡ್ಯದಲ್ಲಿ 99.20 ಲಕ್ಷ ದಾಖಲೆ ರಹಿತ ಹಣ ವಶಪಡಿಸಿಕೊಂಡ ಪೊಲೀಸರು - Mahanayaka

ಮಂಡ್ಯದಲ್ಲಿ 99.20 ಲಕ್ಷ ದಾಖಲೆ ರಹಿತ ಹಣ ವಶಪಡಿಸಿಕೊಂಡ ಪೊಲೀಸರು

mandya
19/03/2024


Provided by

ಮಂಡ್ಯ: ಮಂಡ್ಯದ ಮದ್ದೂರಿನ ನಿಡಘಟ್ಟ ಚೆಕ್‌ ಪೋಸ್ಟ್‌ ನಲ್ಲಿ ದಾಖಲೆ ರಹಿತ 99 ಲಕ್ಷದ 20 ಸಾವಿರ ಹಣವನ್ನು ಚುನಾವಣಾಧಿಕಾರಿಗಳ ವಶಕ್ಕೆ ಪಡೆದುಕೊಂಡಿದ್ದಾರೆ.

ಕ್ರೇಟಾ ಕಾರಿನಲ್ಲಿ ಈ ಹಣವನ್ನು ಸಾಗಿಸಲಾಗುತ್ತಿತ್ತು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪರಿಶೀಲನೆಯಲ್ಲಿ ತೊಡಗಿದ್ದ ಪೊಲೀಸರು ಕಾರು ನಿಲ್ಲಿಸಿ ತಪಾಸಣೆ ನಡೆಸಿದ ವೇಳೆ ದಾಖಲೆ ರಹಿತ 99  ಲಕ್ಷದ 20 ಸಾವಿರ ರೂಪಾಯಿ ಕಾರಿನಲ್ಲಿ ಪತ್ತೆಯಾಗಿದೆ.

ಕೆ.ಆರ್.ಪೇಟೆ ಮೂಲಕ ಅಡಿಕೆ ವ್ಯಾಪಾರಿಗೆ ಸೇರಿದ ನಗದು ಇದಾಗಿದೆ. ಸದ್ಯ ಸೂಕ್ತ ದಾಖಲೆ ಒದಗಿಸದ ಹಿನ್ನೆಲೆ ಹಣವನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಚುನಾವಣಾ ಅಕ್ರಮಗಳು ನಡೆಯಬಾರದು ಎನ್ನುವ ನಿಟ್ಟಿನಲ್ಲಿ ಚುನಾವಣಾಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಅಂತೆಯೇ ಮಂಡ್ಯದಲ್ಲಿ 99.20 ಲಕ್ಷ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ