ಪ್ರಧಾನಿ ಮೋದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್: ಎಎಪಿಗೆ ಚುನಾವಣಾ ಆಯೋಗ ನೋಟಿಸ್ - Mahanayaka

ಪ್ರಧಾನಿ ಮೋದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್: ಎಎಪಿಗೆ ಚುನಾವಣಾ ಆಯೋಗ ನೋಟಿಸ್

15/11/2023


Provided by

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಮಾನಹಾನಿಕರ ಮತ್ತು ಅವಮಾನಕರ ಪೋಸ್ಟ್ ಗಳನ್ನು ಹಂಚಿಕೊಂಡಿದ್ದಕ್ಕಾಗಿ ಚುನಾವಣಾ ಆಯೋಗವು ಆಮ್ ಆದ್ಮಿ ಪಕ್ಷಕ್ಕೆ ಶೋಕಾಸ್ ನೋಟಿಸ್ ನೀಡಿದೆ.

ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳಲ್ಲಿ ನೀಡಲಾದ ಹೇಳಿಕೆಗಳನ್ನು ಗುರುವಾರದೊಳಗೆ ವಿವರಿಸುವಂತೆ ಕೇಳಲಾಗಿದೆ.

ನೋಟಿಸ್ ಪ್ರಕಾರ, ಎಎಪಿ ಎಕ್ಸ್ ನಲ್ಲಿ (ಈ ಹಿಂದೆ ಟ್ವಿಟರ್) ಹಂಚಿಕೊಂಡ ಎರಡು ಪೋಸ್ಟ್ ಗಳು ಬಿಜೆಪಿಯ “ಸ್ಟಾರ್ ಪ್ರಚಾರಕ” ಪ್ರಧಾನಿ ನರೇಂದ್ರ ಮೋದಿಯವರನ್ನು “ಅವಹೇಳನಕಾರಿ, ಅವಮಾನಕರ ಮತ್ತು ಮಾನಹಾನಿಕರ ರೀತಿಯಲ್ಲಿ” ಚಿತ್ರಿಸಿವೆ ಎಂದು ಹಲವಾರು ಬಿಜೆಪಿ ನಾಯಕರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಚುನಾವಣೆಗೆ ನಿಂತಿರುವ ಬಿಜೆಪಿ ನಾಯಕರ ಉಮೇದುವಾರಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ದುರುದ್ದೇಶದಿಂದ ಈ ಪೋಸ್ಟ್ ಗಳನ್ನು ಹಂಚಿಕೊಳ್ಳಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇತ್ತೀಚಿನ ಸುದ್ದಿ