ನಿನ್ನೆ ಸತ್ತಿದ್ದ ಪೂನಂ ಪಾಂಡೆ ಇಂದು ಜೀವಂತ!: ನಾನು ಬದುಕಿದ್ದೀನಿ ಎಂದ ನಟಿ!

ನಿನ್ನೆಯಷ್ಟೇ ಬಾಲಿವುಡ್ ನಟಿ ಪೂನಂ ಪಾಂಡೆ ಸಾವನ್ನಪ್ಪಿರೋದಾಗಿ ಇನ್ ಸ್ಟಾಗ್ರಾಮ್ ನಲ್ಲಿ ಅವರ ಮ್ಯಾನೇಜರ್ ಮಾಹಿತಿ ಹಂಚಿಕೊಂಡಿದ್ದರು. ಆದರೆ ಇದೀಗ ತಾನು ಸತ್ತಿಲ್ಲ ಬದುಕಿದ್ದೀನಿ ಎಂದು ಪೂನಂ ಪಾಂಡೆ ಪೋಸ್ಟ್ ಹಂಚಿಕೊಂಡಿದ್ದಾರೆ.
ಗರ್ಭ ಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ತಾನು ಸತ್ತಿರುವುದಾಗಿ ಹೇಳಿಕೊಂಡಿದ್ದೆ. ಈ ರೋಗವನ್ನು ಹೇಗೆ ಎದುರಿಸಬೇಕು ಎನ್ನುವುದು ತಿಳಿಯದ ಕಾರಣ ಇದು ನೂರಾರು ಮಹಿಳೆಯರನ್ನು ಬಲಿ ಪಡೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.
ಗರ್ಭ ಕಂಠ ಕ್ಯಾನ್ಸರ್ ಇತರ ಕೆಲವು ಕ್ಯಾನ್ಸರ್ ಗಿಂತ ಭಿನ್ನವಾಗಿದೆ. ಇದನ್ನು ತಡೆಗಟ್ಟಲು ಸಾಧ್ಯವಿದೆ. ಈ ಕಾಯಿಲೆಯಿಂದ ಯಾರೂ ಪ್ರಾಣ ಕಳೆದುಕೊಳ್ಳದಂತೆ ನೋಡಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಒಟ್ಟಿನಲ್ಲಿ ಗರ್ಭ ಕಂಠ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ನೆಪದಲ್ಲಿ ತಾನು ಸತ್ತಿರುವುದಾಗಿ ಮ್ಯಾನೇಜರ್ ಬಳಿಯಿಂದ ಸಾವಿನ ಸುದ್ದಿ ಹರಡಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆಯೂ ಹಲವು ರೀತಿಯ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದ ನಟಿ ಇದೀಗ ಹೊಸ ವಿವಾದವನ್ನೇ ಸೃಷ್ಟಿ ಮಾಡಿದ್ದಾರೆ.
ನಟಿ ಪೂನಂ ಪಾಂಡೆ ಸಾವನ್ನಪ್ಪಿದ ಬಗ್ಗೆ ಇನ್ಸ್ ಸ್ಟಾಗ್ರಾಮ್ ನಲ್ಲಿ ಹಾಕಲಾಗಿದ್ದ ಸಂದೇಶದ ಬಳಿಕ ಸಾಕಷ್ಟು ಗಣ್ಯರು ಸಂತಾಪ ಸೂಚಿಸಿದ್ದರು. ಉತ್ತರ ಪ್ರದೇಶದ ಮನೆಯಲ್ಲಿ ಪೂನಂ ಪಾಂಡೆ ಸಾವನ್ನಪ್ಪಿರೋದಾಗಿ ಹೇಳಲಾಗಿತ್ತು. ಆದ್ರೆ ಇದೀಗ ಪೂನಂ ಪಾಂಡೆ ತಾನು ಸತ್ತಿರೋದಾಗಿ ಸುಳ್ಳು ವದಂತಿ ಹಬ್ಬಿರುವುದು ಸ್ಪಷ್ಟವಾಗಿದೆ.