ದುರಂತ: ಒಡಿಶಾದ ಖ್ಯಾತ ಯುವ ಗಾಯಕಿ ರುಕ್ಸಾನಾ ಇನ್ನಿಲ್ಲ: ಸಾವಿನ ಸುತ್ತ ಅನುಮಾನದ ಹುತ್ತ
ಖ್ಯಾತ ಸಂಬಲ್ಪುರಿ ಗಾಯಕಿ ರುಕ್ಸಾನಾ ಬಾನು ಅವರು ಏಮ್ಸ್ ಭುವನೇಶ್ವರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
27 ವರ್ಷದ ರುಕ್ಸಾನಾ ಸ್ಕ್ರಬ್ ಟೈಫಸ್ ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದರೂ, ಬುಧವಾರ ರಾತ್ರಿ ಸಂಭವಿಸಿದ ಅವರ ಸಾವಿಗೆ ಕಾರಣವನ್ನು ಅವರು ಇನ್ನೂ ಬಹಿರಂಗಪಡಿಸಿಲ್ಲ.
ಕಲಾವಿದೆಯ ಗುರುತನ್ನು ಬಹಿರಂಗಪಡಿಸದೆ ಪಶ್ಚಿಮ ಒಡಿಶಾದ ಪ್ರತಿಸ್ಪರ್ಧಿ ಗಾಯಕನೇ ತನ್ನ ಪುತ್ರಿಗೆ ವಿಷಪ್ರಾಶನ ಮಾಡಿದ್ದಾನೆ ಎಂದು ಆಕೆಯ ತಾಯಿ ಮತ್ತು ಸಹೋದರಿ ಆರೋಪಿಸಿದ್ದಾರೆ. ರುಕ್ಸಾನಾಗೆ ಈ ಹಿಂದೆ ಬೆದರಿಕೆಗಳು ಬಂದಿತ್ತು ಎಂದು ಅವರು ಹೇಳಿದ್ದಾರೆ.
ಸುಮಾರು 15 ದಿನಗಳ ಹಿಂದೆ, ರುಕ್ಸಾನಾ ಬೋಲಾಂಗೀರ್ ನಲ್ಲಿ ಚಿತ್ರೀಕರಣದ ಸಮಯದಲ್ಲಿ ಜ್ಯೂಸ್ ಕುಡಿದ ನಂತರ ಅನಾರೋಗ್ಯಕ್ಕೆ ಒಳಗಾಗಿದ್ದರು. ತದನಂತರ ಅವರನ್ನು ಭವಾನಿಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರಾಥಮಿಕ ಚಿಕಿತ್ಸೆಯ ನಂತರ ಅವರನ್ನು ಬೋಲಾಂಗೀರ್‌ನ ಭೀಮಾ ಭೋಯ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ಅವರ ಸ್ಥಿತಿ ಹದಗೆಟ್ಟಿದ್ದರಿಂದ ಬಾರ್ಗಢದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ನಂತರ ಅವರ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡುಬರದ ಕಾರಣ ಅವರನ್ನು ಏಮ್ಸ್ ಭುವನೇಶ್ವರಕ್ಕೆ ಕರೆತರಲಾಯಿತು” ಎಂದು ಅವರ ಸಹೋದರಿ ರೂಬಿ ಬಾನು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth