ಪ್ರಧಾನಿ ಮೋದಿ ಉದ್ಘಾಟಿಸಿದ ರಸ್ತೆ ನಾಲ್ಕೇ ದಿನದಲ್ಲಿ ಕುಸಿತ! - Mahanayaka

ಪ್ರಧಾನಿ ಮೋದಿ ಉದ್ಘಾಟಿಸಿದ ರಸ್ತೆ ನಾಲ್ಕೇ ದಿನದಲ್ಲಿ ಕುಸಿತ!

bundelkhand expressway
22/07/2022

ಪ್ರಧಾನಿ ನರೇಂದ್ರ ಮೋದಿ ಯುಪಿಯಲ್ಲಿ ಉದ್ಘಾಟಿಸಿದ ಬುಂದೇಲ್‌ ಖಂಡ್ ಎಕ್ಸ್‌ ಪ್ರೆಸ್‌ವೇ ಉದ್ಘಾಟನೆಯಾದ 4 ದಿನಗಳ ಅಂತರದಲ್ಲಿ ವಿವಿಧ ಭಾಗಗಳಲ್ಲಿ  ಮಳೆಯಿಂದ ಹಾನಿಯಾಗಿದೆ.  ಹಾಳಾದ ರಸ್ತೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಜುಲೈ 16 ರಂದು,  ಇಟವೇಯ ಕುದುರೆಲ್ ನಿಂದ ಚಿತ್ರಕೂಟದ ಭಾರತ್  ಕೂಪ್‌ ಗೆ ಸಂಪರ್ಕಿಸುವ ಎಕ್ಸ್‌ಪ್ರೆಸ್‌ ವೇಯನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಿದರು. ಏಳು ಜಿಲ್ಲೆಗಳಲ್ಲಿ ಹಾದು ಹೋಗುವ ಈ ಎಕ್ಸ್‌ ಪ್ರೆಸ್‌ ವೇಗೆ 8,000 ಕೋಟಿ ರೂ.  ವೆಚ್ಚವಾಗಿದೆ. ಆದರೆ,ಉದ್ಘಾಟನೆಗೊಂಡ ಕೆಲವೇ  ದಿನಗಳಲ್ಲಿ ಎಕ್ಸ್ ಪ್ರೆಸ್ ವೇಯಲ್ಲಿ ವಿವಿಧೆಡೆ ಟಾರ್ ಕೊಚ್ಚಿ ಹೋಗಿದೆ.

ಈ ಸ್ಥಳಗಳಲ್ಲಿ ಗುಂಡಿಗಳು ಉಂಟಾಗಿ ವಾಹನ ಅಪಘಾತಗಳೂ ಸಂಭವಿಸಿವೆ.  ನಿನ್ನೆ ರಾತ್ರಿ ಎರಡು ಕಾರು ಮತ್ತು ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿದೆ.  ಮುಖ್ಯವಾಗಿ ಚಿರಿಯಾ ಮತ್ತು ಅಜಿತ್ಮಾಲ್‌ ನಲ್ಲಿ ರಸ್ತೆಗಳು ಹಾಳಾಗಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ