ಪ್ರಜ್ವಲ್ ರೇವಣ್ಣ ವಿರುದ್ಧ ಕಡೂರಿನಲ್ಲಿ ಪೋಸ್ಟರ್ ಸಮರ! - Mahanayaka
1:23 PM Tuesday 2 - September 2025

ಪ್ರಜ್ವಲ್ ರೇವಣ್ಣ ವಿರುದ್ಧ ಕಡೂರಿನಲ್ಲಿ ಪೋಸ್ಟರ್ ಸಮರ!

kaduru
07/04/2024


Provided by

ಚಿಕ್ಕಮಗಳೂರು:  ಕಡೂರು ಕಾಂಗ್ರೆಸ್ ನಿಂದ ಪ್ರಜ್ವಲ್ ರೇವಣ್ಣ ವಿರುದ್ಧ ಅಭಿಯಾನ ಆರಂಭವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಯುದ್ಧ ಆರಂಭಗೊಂಡಿದೆ.

ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು   ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹರಿಯಬಿಟ್ಟಿದ್ದು, ಲೋಕಸಭಾ ಚುನಾವಣಾ ಕ್ವಿಜ್– 2024 ,  ಪ್ರಜ್ವಲ್ ರೇವಣ್ಣ ಸಂಸದರಾದ ಬಳಿಕ ಕಡೂರಿಗೆ ನಿಮ್ಮ ಕೊಡುಗೆ ಏನು..?.  ಚುನಾವಣೆ ಸಂದರ್ಭದಲ್ಲಿ ಮಾತ್ರ ಕಡೂರು ಪ್ರವಾಸ ಮಾತ್ರಾನಾ..?  ಲೋಕಸಭಾ ಸದಸ್ಯರಾಗಿ ಕಡೂರಿಗೆ ಮಾಡಿರುವ ಅಭಿವೃದ್ಧಿ ಕೆಲಸಗಳು ಎಷ್ಟು..? ಎಂದು ಪ್ರಶ್ನಿಸಲಾಗಿದೆ.

ಆತ್ಮಸಾಕ್ಷಿ ಕೇಳಿಕೊಳ್ಳಿ ಸಂಸದರೇ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಪ್ರಜ್ವಲ್ ಮಣಿಸಲು ಕಡೂರಿನಲ್ಲಿ ಕಾಂಗ್ರೆಸ್ ಪೋಸ್ಟರ್ ವಾರ್ ಆರಂಭಿಸಿದೆ. ಜೆಡಿಎಸ್ ಹಾಗೂ ಬಿಜೆಪಿಗೆ ಮತ ನೀಡಬೇಡಿ ಎಂದು ಅಭಿಯಾನ ಆರಂಭಿಸಿದ್ದಾರೆ.

ಕಡೂರು ಶಾಸಕ ಕೆ.ಎಸ್.ಆನಂದ್ ಇರುವ ವಾಟ್ಸಪ್ ಗ್ರೂಪ್ ನಿಂದ  ಈ ಫೋಟೋಗಳು ವೈರಲ್ ಆಗುತ್ತಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ