ಉಳ್ಳಾಲ: ಪಂಜಿಮೊಗರು ಜೋಡಿ ಕೊಲೆ ಕೇಸ್ ನ ಮೃತ ಮಹಿಳೆಯ ಪತಿಗೆ ಚೂರಿ ಇರಿತ - Mahanayaka

ಉಳ್ಳಾಲ: ಪಂಜಿಮೊಗರು ಜೋಡಿ ಕೊಲೆ ಕೇಸ್ ನ ಮೃತ ಮಹಿಳೆಯ ಪತಿಗೆ ಚೂರಿ ಇರಿತ

police
06/04/2024

ಉಳ್ಳಾಲ: 13  ವರ್ಷಗಳ ಹಿಂದೆ ನಡೆದಿದ್ದ  ಪಂಜಿಮೊಗರು ತಾಯಿ ಹಾಗೂ ಮಗಳು ಕೊಲೆ ಪ್ರಕರಣದ ಮಗುವಿನ ತಂದೆ, ಮಹಿಳೆ ಪತಿ ಹಮೀದ್ ಎಂಬವರನ್ನು  ಚೂರಿಯಿಂದ ಇರಿದು ಹತ್ಯೆಗೆ ಯತ್ನಿಸಿದ ಘಟನೆ ಉಳ್ಳಾಲ ನಗರಸಭೆ ಸಮೀಪದ ಬಾಡಿಗೆ ಮನೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.


Provided by

ಪಂಜಿಮೊಗರು ನಿವಾಸಿಯಾಗಿದ್ದ, ಸದ್ಯ ಉಳ್ಳಾಲ ನಗರಸಭೆ ಕಚೇರಿ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಹಮೀದ್ ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಖ್ಯಾತ ಈಜುಪಟು ಜಾವೇದ್ ಎಂಬಾತ ಕೃತ್ಯ  ಎಸಗಿದ್ದು,  ಹಣದ ವಿಚಾರವಾಗಿ ಕೃತ್ಯ ನಡೆದಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಉಳ್ಳಾಲ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.

ಪಂಜಿಮೊಗರು ಜೋಡಿ ಕೊಲೆ:


Provided by

ಪಂಜಿಮೊಗರಿನಲ್ಲಿ 2011ರ ಜೂ.28ರಂದು ಮಧ್ಯಾಹ್ನ ಚೂರಿಯಿಂದ ತಿವಿದು ತಾಯಿ ರಜಿಯಾ ಮತ್ತು ಆಕೆಯ ಪುಟ್ಟ ಮಗು ಫಾತಿಮಾ ಜುವಾ ಎಂಬುವವರನ್ನು ಹತ್ಯೆ ಮಾಡಲಾಗಿತ್ತು. ಈ ಘಟನೆ ಕರಾವಳಿಯಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಆದರೆ, ಈ ಘಟನೆ ನಡೆದು 13 ವರ್ಷ ಕಳೆದರೂ ಹತ್ಯೆ ಆರೋಪಿಗಳು ಪತ್ತೆಯಾಗಿಲ್ಲ. ಈ ಕುರಿತು ಸ್ಥಳೀಯ ಪೊಲೀಸರ ಜೊತೆ ಸಿಐಡಿ ತನಿಖೆ ನಡೆದರೂ ಹಂತಕರು ಸಿಕ್ಕಿಲ್ಲ.

ಮೃತ ರಜಿಯಾಳ ಪತಿ, ಸದ್ಯ ಕೊಲೆ ಯತ್ನಕ್ಕೆ ಒಳಗಾದ ಹಮೀದ್ ಪಿ.ಎಂ. ವಿರುದ್ದವೂ ಆರೋಪ ಕೇಳಿ ಬಂದಿತ್ತು. ಪತಿ‌ ಹಮೀದ್ ಮನೆಯಿಂದ ಹೊರ ಹೋದ 30 ನಿಮಿಷದ ಬಳಿಕ ಹತ್ಯೆಯಾಗಿತ್ತು. ಆದರೆ, ಸ್ಥಳೀಯ ಪೊಲೀಸರು ಹಾಗೂ ಸಿಐಡಿ ತನಿಖೆ ವೇಳೆ ಹಮೀದ್ ಕೈವಾಡ ಇಲ್ಲ ಎಂದಾಗಿತ್ತು. ಅಲ್ಲದೇ ಪತಿ ಹಮೀದ್ ಮಂಪರು ಪರೀಕ್ಷೆಗೂ ಆಗ್ರಹಿಸಿದ್ದರು. ಇದೀಗ ಉಳ್ಳಾಲದಲ್ಲಿ ಹಮೀದ್​​ಗೆ ಚೂರಿ ಇರಿದು ಹತ್ಯೆಗೆ ಯತ್ನಿಸಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ