ವಯಸ್ಸಾದ ತಾಯಿಯನ್ನ ಆ ರೀತಿ ಬಳಸಿಕೊಂಡಿದ್ದಾರೆ: ಪ್ರಜ್ವಲ್ ವಿರುದ್ಧ ಡಿ.ಕೆ.ಸುರೇಶ್ ಆಕ್ರೋಶ

ಬೆಂಗಳೂರು: ಆ ವೀಡಿಯೋ ನೋಡೋದಕ್ಕೆ ಆಗಲಿಲ್ಲ. ಅದು ಎರಡು ನಿಮಿಷದ್ದು, ವಯಸ್ಸಾದ ತಾಯಿಯನ್ನ ಆ ರೀತಿ ಬಳಸಿಕೊಂಡಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಪ್ರಜ್ವಲ್ ರೇವಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಇಡೀ ದೇಶವೇ ಅಸಹ್ಯ ಪಡುವಂತಹ ಘಟನೆಯಾಗಿದೆ. ಈ ಪ್ರಕರಣದ ಬಗ್ಗೆ ಪ್ರಧಾನಿ ಮೋದಿ ಮಾತನಾಡಬೇಕು ಎಂದು ಅವರು ಒತ್ತಾಯಿಸಿದರು.
ಈ ಪ್ರಕರಣದ ಸಂತ್ರಸ್ತರ ಪರವಾಗಿ ಸರ್ಕಾರ ನಿಲ್ಲ ಬೇಕು. ಸಂತ್ರಸ್ತರಿಗೆ ಸರ್ಕಾರ ರಕ್ಷಣೆ ನೀಡಬೇಕು. ಒಳ್ಳೆಯ ವಿಚಾರ ಆದಾಗ ಕುಟುಂಬ, ಈಗ ಕುಟುಂಬದ ಹೆಸರು ಹೇಳಬಾರದಾ? ಕುಟುಂಬದವರೇ ಅವರ ರಕ್ಷಣೆಗೆ ನಿಂತಿದ್ದಾರೆ. ಬೇರೆ ಯಾರಾದ್ರೂ ಹೀಗೆ ಮಾಡಿದ್ರೆ, ದೇವೇಗೌಡರು, ಕುಮಾರಸ್ವಾಮಿ ಸುಮ್ನೇ ಇರ್ತಿದ್ರಾ? ಎಂದು ಪ್ರಶ್ನಿಸಿದರು.
ತಾಯಂದಿರ ರಕ್ಷಣೆ ಮಾಡಬೇಕು, ಇದು ಅತ್ಯಂತ ಅಸಹ್ಯಕರ ವಿಚಾರವಾಗಿದೆ. ದೇವೇಗೌಡರ ಕುಟುಂಬ ಈ ರೀತಿ ಅನೇಕ ಸಲ ಮಾಡಿಕೊಂಡೇ ಬಂದಿದೆ. ಯಾರು ಏನೂ ಮಾಡಲು ಆಗಲ್ಲ ಅನ್ನೋ ಮನೋಭಾವ ಅವರದ್ದಾಗಿದೆ. ರೇವಣ್ಣ ಇದನ್ನು ರಾಜಕೀಯ ಷಡ್ಯಂತ್ರ ಅಂತ ಹೇಳಿದ್ರೆ , ಅದು ಕುಮಾರಸ್ವಾಮಿ ಮಾಡಿರೋದೇ ಆಗಿರಬೇಕು ಎಂದು ಹೇಳಿದರು.
ಇದು ಒಂದೆರಡು ಪ್ರಕರಣ ಅಲ್ಲ, 500ಕ್ಕೂ ಹೆಚ್ಚು ಇದೆ ಅಂತಿದ್ದಾರೆ. ಇದು ಇಡೀ ದೇಶದಲ್ಲೇ ಅತ್ಯಂತ ದೊಡ್ಡ ಪ್ರಕರಣ. ಇದು ಕುಟುಂಬದ ಹೊಣೆ ಅಲ್ಲಾ ಅಂತಾರೆ… ಮತ್ತೇನು? ಈ ಪೆನ್ ಡ್ರೈವ್ ವಿಚಾರ ಪ್ರಧಾನಿ ಕಚೇರಿಗೂ ತಲುಪಿದೆ. ಪ್ರಧಾನಿ ಅವರ ಗಮನಕ್ಕೂ ಬಂದಿದೆ. ಇದು ದೊಡ್ಡ ರಾಕೆಟ್ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth