ವಿನೇಶ್ ಪೋಗಟ್ ಅನರ್ಹತೆ: ಪೋಸ್ಟ್ ಶೇರ್ ಮಾಡಿ ‘ಊಹಿಸಿ’ ಎಂದ ಪ್ರಕಾಶ್ ರಾಜ್

ಕುಸ್ತಿಪಟು ವಿನೇಶ್ ಪೋಗಟ್ ಅನರ್ಹತೆ ದೇಶಾದ್ಯಂತ ಕ್ರೀಡಾಪ್ರೇಮಿಗಳ ದುಃಖಕ್ಕೆ ಕಾರಣವಾಗಿದೆ. ಈ ಬಗ್ಗೆ ನಾನಾ ರೀತಿಯ ಚರ್ಚೆಗಳು ದೇಶದಲ್ಲಿ ನಡೆಯುತ್ತಿದ್ದು, ಈ ನಡುವೆ ಚಿತ್ರ ನಟ ಪ್ರಕಾಶ್ ರಾಜ್ ತಮ್ಮದೇ ಆದ ಶೈಲಿಯಲ್ಲಿ ಕಾರ್ಟೂನ್ ವೊಂದನ್ನು ಶೇರ್ ಮಾಡಿಕೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಕಾಶ್ ರಾಜ್ ಶೇರ್ ಮಾಡಿರುವ ಕಾರ್ಟೂನ್ ನಲ್ಲಿ ವಿನೇಶ್ ಪೋಗಟ್ ತೂಕ ತಪಾಸಣೆ ಮಾಡುವಾಗ ಹಿಂದಿನಿಂದ ಒಬ್ಬ ವ್ಯಕ್ತಿ ತೂಕದ ಯಂತ್ರದ ಮೇಲೆ ಒಂದು ಕಾಲನ್ನು ಇಟ್ಟಿರುವಂತೆ ಕಾರ್ಟೂನ್ ನಲ್ಲಿ ತೋರಿಸಲಾಗಿದೆ. ಈ ಕಾರ್ಟೂನ್ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದ್ದು, ಊಹಿಸಿ ಎಂದು ಹೇಳಿದ್ದಾರೆ.
ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ನಂತರ ಗುರುವಾರ ಕುಸ್ತಿಯಿಂದ ನಿವೃತ್ತಿ ಘೋಷಿಸಿದ್ದಾರೆ.
ಕುಸ್ತಿಯಿಂದ ಅನರ್ಹಗೊಂಡ ಬೆನ್ನಲ್ಲೇ ವಿನೇಶ್ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ. ಅಮ್ಮಾ, ಕುಸ್ತಿ ನನ್ನನ್ನು ಸೋಲಿಸಿದೆ, ನಾನು ಸೋತಿದ್ದೇನೆ. ನಾನು ಸೋತಿದ್ದೇನೆ. ನನ್ನ ಧೈರ್ಯವು ಮುರಿದುಹೋಗಿದೆ, ನನಗೆ ಈಗ ಯಾವುದೇ ಶಕ್ತಿ ಇಲ್ಲ ಎಂದು ವಿನೇಶ್ ಬರೆದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth