ಚಿಕ್ಕಮ್ಮನ ಜೊತೆಗೆ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತ್ನಿಯ ಭೀಕರ ಹತ್ಯೆ!
ಚಿಕ್ಕಮ್ಮನ ಜೊತೆಗಿನ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತ್ನಿಯನ್ನು ಪತಿ ಹಾಗೂ ಆತನ ಚಿಕ್ಕಮ್ಮ ಸೇರಿ ಆ್ಯಸಿಡ್ ಕುಡಿಸಿ, ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಬಿಹಾರದ ಭಾಗಲ್ಪುರದಲ್ಲಿ ನಡೆದಿದೆ.
ಶಬ್ನಮ್ ಖಾತೂನ್ ಹತ್ಯೆಗೀಡಾದ ಮಹಿಳೆಯಾಗಿದ್ದಾರೆ. ಹತ್ಯೆಯ ಬಳಿಕ ಆರೋಪಿಗಳು ಮೃತದೇಹವನ್ನು ಕೋಸಿ ನದಿಗೆ ಎಸೆದಿದ್ದಾರೆ. ಪತಿ ಫಯಾಝ್ ಹಾಗೂ ಚಿಕ್ಕಮ್ಮ ರೀನಾ ಖಾತೂನ್ ಹತ್ಯೆ ಮಾಡಿದ ಆರೋಪಿಗಳಾಗಿದ್ದಾರೆ.
ಎರಡು ವರ್ಷಗಳ ಹಿಂದೆ ಫಯಾಝ್, ಶಬ್ನಮ್ ಖಾತೂನ್ ಅವರನ್ನು ವಿವಾಹವಾಗಿದ್ದ. ವಿವಾಹವಾದರೂ ಫಯಾಝ್ ತನ್ನ ಚಿಕ್ಕಮ್ಮ ರೀನಾ ಖಾತೂನ್ ಜೊತೆಗೆ ಅಕ್ರಮ ಸಂಬಂಧ ಮುಂದುವರಿಸಿದ್ದ. ಈ ವಿಚಾರ ತಿಳಿದು ಶಬ್ನಮ್ ವಿರೋಧಿಸಿದ್ದಳು. ಇದರಿಂದ ಕೋಪಗೊಂಡು ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಶಬ್ನಮ್ ಕುಟುಂಬಸ್ಥರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಾದ ಫಯಾಜ್ ಮತ್ತು ಚಿಕ್ಕಮ್ಮ ರೀನಾಳನ್ನು ಬಂಧಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth