ಪ್ರವಚನ ನೀಡುತ್ತಲೇ ವೇದಿಕೆಯಲ್ಲಿಯೇ ಹೃದಯಾಘಾತದಿಂದ ನಿಧನರಾದ ಸ್ವಾಮೀಜಿ - Mahanayaka
1:27 PM Wednesday 17 - September 2025

ಪ್ರವಚನ ನೀಡುತ್ತಲೇ ವೇದಿಕೆಯಲ್ಲಿಯೇ ಹೃದಯಾಘಾತದಿಂದ ನಿಧನರಾದ ಸ್ವಾಮೀಜಿ

sangana basava
16/11/2021

ಬೆಳಗಾವಿ: ವೇದಿಕೆ ಮೇಲೆ ಕುಳಿತು ಆಶೀರ್ವಚನ ನೀಡುತ್ತಿರುವಾಗಲೇ ಸ್ವಾಮೀಜಿಯೊಬ್ಬರು ಹೃದಯಾಘಾತದಿಂದ ನಿಧನರಾದ ಘಟನೆ ನಡೆದಿದ್ದು,  53 ವರ್ಷ ವಯಸ್ಸಿನ ಸಂಗನಬಸವ ಮಹಾಸ್ವಾಮೀಜಿ ತಮ್ಮ ಹುಟ್ಟು ಹಬ್ಬದ ದಿನವೇ ಅಗಲಿದ್ದಾರೆ.


Provided by

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದ ಬಸವಯೋಗ ಮಂಟಪ ಟ್ರಸ್ಟ್ ಬಳೋಬಾಳ ಮಠದ ಸ್ವಾಮೀಯಾಗಿರುವ ಸಂಗನಬಸವ ಮಹಾಸ್ವಾಮೀಜಿ ತಮ್ಮ ಹುಟ್ಟು ಹಬ್ಬದ ವಿನವೇ ಪ್ರವಚನ ನೀಡುತ್ತಲೇ ಕುಳಿತ ಸ್ಥಳದಲ್ಲಿಯೇ ತಮ್ಮ ಆಸನಕ್ಕೆ ಒರಗಿ ಅಸುನೀಗಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಸ್ವಾಮೀಜಿಗಳು ವಿವಿಧ ವಿಚಾರಗಳ ಬಗ್ಗೆ ಸರಾಗವಾಗಿ ಮಾತನಾಡುತ್ತಲೇ ಇದ್ದರು, ಆದರೆ ಏಕಾಏಕಿ ಅವರು ತಾವು ಕುಳಿತಿದ್ದ ಆಸನಕ್ಕೆ ಒರಗಿ ಕುಸಿದಿದ್ದು, ಹೃದಯಾಘಾತಗೊಂಡು ಮೃತಪಟ್ಟಿದ್ದಾರೆ. ವೇದಿಕೆಯಲ್ಲಿದ್ದ ಇತರ ಗಣ್ಯರು ಕೆಲವೇ ಕ್ಷಣದಲ್ಲಿ ನಡೆದ ಘಟನೆಯಿಂದ ಬೆಚ್ಚಿಬಿದ್ದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಇನ್ನಷ್ಟು ಸುದ್ದಿಗಳು

ಮನೆಗೆ ಬಡಿದ ಸಿಡಿಲು: ವ್ಯಕ್ತಿ ದಾರುಣ ಸಾವು | ಸಮೀಪದ ಮನೆಗಳಿಗೂ ತೀವ್ರ ಹಾನಿ

ಅನೈತಿಕ ಪೊಲೀಸ್ ಗಿರಿ:  ವಿದ್ಯಾರ್ಥಿಗೆ ಹಲ್ಲೆ ನಡೆಸಿ, ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ ಪುಂಡರು

ಡಿಬೆಟ್ ಗೆ ಬನ್ನಿ, ನನ್ನ ಹಿಂದುತ್ವ ಏನು ಅಂತ ಬೋಧನೆ ಮಾಡುತ್ತೇನೆ | ದೀಪು ಶೆಟ್ಟಿಗಾರ್ ಸವಾಲು

ಬಸ್ ನಿಲ್ದಾಣದಲ್ಲಿಯೇ ಬಿಟ್ಟು ಬಂದಿದ್ದಕ್ಕೆ ಕೆಎಸ್ಸಾರ್ಟಿಸಿಗೆ ಬಿಸಿ ಮುಟ್ಟಿಸಿದ ಹಿರಿಯ ನಾಗರಿಕ!

ಇಂದು ಪುನೀತ್ ನಮನ: ಸ್ಟಾರ್ ನಟರು ಭಾಗಿಯಾಗುವ ಸಾಧ್ಯತೆ | ಪಾಸ್ ಇದ್ದವರಿಗೆ ಮಾತ್ರ ಎಂಟ್ರಿ!

ಕಂಗನಾ ಹೇಳಿದ್ದನ್ನು ಮುಸ್ಲಿಮ್ ವ್ಯಕ್ತಿ ಹೇಳಿದ್ದರೆ, ಮೊಣಕಾಲಿಗೆ ಗುಂಡಿಟ್ಟು ಜೈಲಿಗಟ್ಟಲಾಗುತ್ತಿತ್ತು | ಓವೈಸಿ

 

ಇತ್ತೀಚಿನ ಸುದ್ದಿ