ಮನೆಗೆ ಬಡಿದ ಸಿಡಿಲು: ವ್ಯಕ್ತಿ ದಾರುಣ ಸಾವು | ಸಮೀಪದ ಮನೆಗಳಿಗೂ ತೀವ್ರ ಹಾನಿ - Mahanayaka

ಮನೆಗೆ ಬಡಿದ ಸಿಡಿಲು: ವ್ಯಕ್ತಿ ದಾರುಣ ಸಾವು | ಸಮೀಪದ ಮನೆಗಳಿಗೂ ತೀವ್ರ ಹಾನಿ

death
16/11/2021

ಕಾರ್ಕಳ:  ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮ ವ್ಯಕ್ತಿಯೋರ್ವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಕಾರ್ಕಳ ತಾಲೂಕಿನ ಬೈಲೂರು ಸಮೀಪದ ನೀರೆ ಎಂಬಲ್ಲಿ ಸೋಮವಾರ ಸಂಜೆ ನಡೆದಿದ್ದು, ಸಿಡಿಲಿನಬ್ಬರಕ್ಕೆ  ವಿದ್ಯುತ್ ಪರಿಕರಗಳು ಕೂಡ ಹಾನಿಯಾಗಿವೆ.


Provided by

ನೀರೆ ರಾಜೀವ ನಗರದ 60 ವರ್ಷ ವಯಸ್ಸಿನ ವಾದಿರಾಜ ಆಚಾರ್ಯ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ 4 ಗಂಟೆಯ ವೇಳೆ ಸಿಡಿಲು ಬಡಿದಿದ್ದು, ಪರಿಣಾಮವಾಗಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸಿಡಿಲಿನ ತೀವ್ರತೆಗೆ ಮನೆಗೆ ಭಾರೀ ಹಾನಿಯಾಗಿದ್ದು, ಇವರ ಮನೆಯ ಅಕ್ಕಪಕ್ಕದ ಮನೆಗಳಿಗೂ ಹಾನಿ ಸಂಭವಿಸಿದೆ. ಸಿಡಿಲು ಅಪ್ಪಳಿಸಿದ ವೇಳೆ ವಾದಿರಾಜರು ಕುಸಿದು ಬಿದ್ದಿದ್ದು, ತಕ್ಷಣವೇ ಅವರನ್ನು  ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.


Provided by

ಘಟನಾ ಸ್ಥಳಕ್ಕೆ ಕಾರ್ಕಳ ಪ್ರಭಾರ ತಹಶೀಲ್ದಾರ್ ಪುರಂದರ, ಕಂದಾಯ ನಿರೀಕ್ಷಕ ಶಿವಪ್ರಸಾದ್ ಭಟ್ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಇನ್ನಷ್ಟು ಸುದ್ದಿಗಳು

ಅನೈತಿಕ ಪೊಲೀಸ್ ಗಿರಿ:  ವಿದ್ಯಾರ್ಥಿಗೆ ಹಲ್ಲೆ ನಡೆಸಿ, ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ ಪುಂಡರು

ಡಿಬೆಟ್ ಗೆ ಬನ್ನಿ, ನನ್ನ ಹಿಂದುತ್ವ ಏನು ಅಂತ ಬೋಧನೆ ಮಾಡುತ್ತೇನೆ | ದೀಪು ಶೆಟ್ಟಿಗಾರ್ ಸವಾಲು

ಬಸ್ ನಿಲ್ದಾಣದಲ್ಲಿಯೇ ಬಿಟ್ಟು ಬಂದಿದ್ದಕ್ಕೆ ಕೆಎಸ್ಸಾರ್ಟಿಸಿಗೆ ಬಿಸಿ ಮುಟ್ಟಿಸಿದ ಹಿರಿಯ ನಾಗರಿಕ!

ಇಂದು ಪುನೀತ್ ನಮನ: ಸ್ಟಾರ್ ನಟರು ಭಾಗಿಯಾಗುವ ಸಾಧ್ಯತೆ | ಪಾಸ್ ಇದ್ದವರಿಗೆ ಮಾತ್ರ ಎಂಟ್ರಿ!

ಕಂಗನಾ ಹೇಳಿದ್ದನ್ನು ಮುಸ್ಲಿಮ್ ವ್ಯಕ್ತಿ ಹೇಳಿದ್ದರೆ, ಮೊಣಕಾಲಿಗೆ ಗುಂಡಿಟ್ಟು ಜೈಲಿಗಟ್ಟಲಾಗುತ್ತಿತ್ತು | ಓವೈಸಿ

ಸತ್ಯದಪ್ಪೆ ಬೊಲ್ಲೆಯ ನೀರ ಮದುವೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 06

ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು: ದಂಪತಿಯ ದಾರುಣ ಸಾವು

ಇತ್ತೀಚಿನ ಸುದ್ದಿ