ಪ್ರಿಪ್ಲ್ಯಾನ್: 2 ತಿಂಗಳ ಹಿಂದೆಯೇ ಹಮಾಸ್ ನಾಯಕ ಇಸ್ಮಾಯಿಲ್ ಹನಿಯ ಹತ್ಯೆಗೆ ಸಂಚು
ಹಮಾಸ್ ನಾಯಕ ಇಸ್ಮಾಯಿಲ್ ಹನಿಯ ಅವರನ್ನು ಹತ್ಯೆ ಮಾಡಲು ಎರಡು ತಿಂಗಳ ಹಿಂದೆಯೇ ಸಂಚು ನಡೆಸಲಾಗಿತ್ತು. ಆ ಹಿನ್ನೆಲೆಯಲ್ಲಿಯೇ ಅವರು ಉಳಿದುಕೊಂಡಿದ್ದ ಗೆಸ್ಟ್ ಹೌಸ್ ನ ಒಳಗೆ ಎರಡು ತಿಂಗಳ ಹಿಂದೆಯೇ ಬಾಂಬನ್ನು ಅಡಗಿಸಿ ಇಡಲಾಗಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಇಸ್ರೇಲ್ ನ ಗುಪ್ತಚರ ಸಂಸ್ಥೆಯಾದ ಮೊಸಾದ್ ನ ಜೊತೆ ಅತಿ ಹತ್ತಿರದ ಸಂಬಂಧ ಇರುವ ಪತ್ರಕರ್ತ ರೋನೆನ್ ಬರ್ಗ್ಮಾ ಅವರು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಹನಿಯ ತಂಗಿದ್ದ ಗೆಸ್ಟ್ ರೂಮ್ ನಲ್ಲಿಟ್ಟಿದ್ದ ಬಾಂಬ್ ಸ್ಪೋಟಿಸಿ ಅವರು ಸಾವಿಗೀಡಾಗಿದ್ದಾರೆ. ಪಶ್ಚಿಮ ತೆಹರಾನಿನ ಅತಿ ಭದ್ರತೆಯ ನಿಶಾತ್ ಎಂಬ ಕಾಂಪೌಂಡಿನ ಒಳಗೆ ಈ ಗೆಸ್ಟ್ ಹೌಸ್ ಇದೆ. ಇದಕ್ಕೆ ಇರಾನಿನ ರೆವಲ್ಯೂಷನರಿ ಗಾರ್ಡ್ ನ ಕಾವಲೂ ಇದೆ. ಹನಿಯ ತಂಗಿದ್ದ ಗೆಸ್ಟ್ ಹೌಸ್ ನ ಒಳಗಿಟ್ಟಿದ್ದ ಬಾಂಬನ್ನು ರಿಮೋಟ್ ಕಂಟ್ರೋಲ್ ಮೂಲಕ ಸ್ಪೋಟಿಸಲಾಗಿದೆ. ಕತಾರ್ನಲ್ಲಿರುವ ಹನಿಯ ಇರಾನಿಗೆ ಬಂದಾಗೆಲ್ಲ ಈ ಗೆಸ್ಟ್ ಹೌಸ್ ನಲ್ಲಿ ತಂಗುತ್ತಿದ್ದರು ಎಂದು ವರದಿಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth