ಹಮಾಸ್ ವಿರುದ್ಧ ಇಸ್ರೇಲ್ ಪರ ಪೋಸ್ಟ್:  ಕನ್ನಡಿಗ ವೈದ್ಯ  ಬಹರೇನ್ ನಲ್ಲಿ ಅರೆಸ್ಟ್ - Mahanayaka
10:17 PM Saturday 23 - August 2025

ಹಮಾಸ್ ವಿರುದ್ಧ ಇಸ್ರೇಲ್ ಪರ ಪೋಸ್ಟ್:  ಕನ್ನಡಿಗ ವೈದ್ಯ  ಬಹರೇನ್ ನಲ್ಲಿ ಅರೆಸ್ಟ್

sunil rao
21/10/2023


Provided by

ಇಸ್ರೇಲ್ ಪರ ಪೋಸ್ಟ್ ಹಾಕಿದ ಆರೋಪದ ಮೇಲೆ ಕನ್ನಡಿಗ ಡಾಕ್ಟರ್ ರೋರ್ವರನ್ನು ಬಹರೇನ್ ಪೊಲೀಸರು ಬಂಧಿಸಿದ್ದಾರೆ.

ಹಮಾಸ್ ಬಂಡುಕೋರರನ್ನು ವಿರೋಧಿಸಿ ವೈದ್ಯ ಸುನಿಲ್‌ ರಾವ್ ಎನ್ನುವವರು ‘X’ ನಲ್ಲಿ ಹಾಕಿರುವ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಕೆಲವರು ಈ ಪೋಸ್ಟ್‌ ಗೆ ಆಕ್ಷೇಪ ವ್ಯಕ್ತಪಡಿಸಿ, ಬಹರೇನ್ ಆಡಳಿತವನ್ನು ಟ್ಯಾಗ್‌ ಮಾಡಿದ್ದರು. ಇದನ್ನು ಆಧರಿಸಿ, ಅಲ್ಲಿನ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ಇದರ ಬೆನ್ನಲ್ಲೇ ಅವರು ಕಾರ್ಯ ನಿರ್ವಹಿಸುತ್ತಿದ್ದ ಬಹರೇನ್‌ನ ರಾಯಲ್ ಆಸ್ಪತ್ರೆ, ಅವರನ್ನು ಕರ್ತವ್ಯದಿಂದ ಬಿಡುಗಡೆ ಗೊಳಿಸಿದೆ. ಈ ಸಂಬಂಧ ಆಸ್ಪತ್ರೆ ‘X’ ನಲ್ಲಿ ಪೋಸ್ಟ್ ಹಾಕಿಕೊಂಡಿದೆ.

10 ವರ್ಷಗಳಿಂದ ಬಹರೇನ್‌ ನಲ್ಲಿ ವಾಸವಿರುವ ಸುನಿಲ್ ಅವರು, ವಿಶಾಖಪಟ್ಟಣದಲ್ಲಿ ಎಂಬಿಬಿಎಸ್ ಮತ್ತು ಮಂಗಳೂರಲ್ಲಿ ಎಂಡಿ ಮಾಡಿದ್ದರು.

ಇತ್ತೀಚಿನ ಸುದ್ದಿ