9 ತಿಂಗಳ ಸಂಬಳ ಬಾಕಿ: ಬಿಸಿಎಂ ಹಾಸ್ಟೆಲ್ ನೌಕರರಿಂದ ಪ್ರತಿಭಟನೆ
ಮಾನ್ವಿ: ತಾಲೂಕಿನ ಸರಕಾರಿ ಹಾಸ್ಟೆಲ್ ನಲ್ಲಿ ಅಡುಗೆ ಕಾರ್ಮಿಕರಿಗೆ ಸಕಾಲಕ್ಕೆ ಸಂಬಳ ನೀಡುತ್ತಿದ್ದೇವೆ ಎಂದು ಹೇಳುತ್ತೆ. ಆದರೆ ಮಾನ್ವಿ ತಾಲೂಕಿನ ಬಿಸಿಎಂ ಇಲಾಖೆಯಲ್ಲಿ 9 ತಿಂಗಳಿಂದ ಸಂಬಳ ನೀಡದಿರುವುದಕ್ಕೆ ಕಾರ್ಮಿಕರು ನಮಗೆ ನ್ಯಾಯಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಮಾನ್ವಿ ತಾಲೂಕಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಅಂಬವ್ವ ಕಾರ್ಮಿಕರನ್ನು ದುಡಿಸಿಕೊಂಡು ಸಂಬಳ ನೀಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಹಾಸ್ಟೆಲ್ ನಲ್ಲಿ ಅಡುಗೆ ಮಾಡಿ ನಾವು ಬದುಕು ಸಾಗಿಸುತ್ತಿದ್ದೇವೆ. ಇದನ್ನು ಬಿಟ್ಟರೆ ನಮಗೆ ಬೇರೆ ಏನು ಗೊತ್ತಿಲ್ಲ. 9 ತಿಂಗಳಿಂದ ನಮಗೆ ಸಂಬಳ ಆಗಿರುವುದಿಲ್ಲ. ನಮ್ಮ ಕುಟುಂಬ ಹೇಗೆ ಜೀವನ ಸಾಗಿಸುವುದು? ನಮ್ಮ ಮಕ್ಕಳ ಶಿಕ್ಷಣಕ್ಕೆ ಫೀ ಹೇಗೆ ಕಟ್ಟಬೇಕು ಮತ್ತು ಮನೆಯನ್ನು ಹೇಗೆ ಸಾಗಿಸಬೇಕು ಎಂದು ಅವರು ಆತಂಕದಿಂದ ಪ್ರಶ್ನಿಸಿದರು.
ತಾಲೂಕು ಅಧಿಕಾರಿ ಅಂಬವ್ವ ಅವರೇ, ನೀವು ಸರಕಾರದ ಸಂಬಳ ತಿಂದು ಹಾಯಾಗಿ ಇರುತ್ತೀರಾ.ಆದರೆ ಬಡ ಕಾರ್ಮಿಕರನ್ನು ದುಡಿಸಿಕೊಂಡು ಈ ರೀತಿಯಾಗಿ ಸಂಬಳ ಕೊಡದೆ ಸತಾಯಿಸುತ್ತಿದ್ದೀರಲ್ಲಾ, ಈ ರೀತಿ ಬಡ ಕಾರ್ಮಿಕರನ್ನು ಸತಾಯಿಸಿದರೆ ನಿಮಗೆ ಆ ದೇವರು ಒಳ್ಳೆಯದು ಮಾಡುತ್ತಾನಾ ಹೇಳಿ ತಾಲೂಕು ಅಧಿಕಾರಿಗಳೇ ಎಂದು ಅಡುಗೆ ಮಾಡುವ ಕಾರ್ಮಿಕರು ಪ್ರಶ್ನಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೆ ನೋಡಿ, ಕಾರ್ಮಿಕರನ್ನು ದುಡಿಸಿಕೊಂಡು ಈ ರೀತಿಯಾಗಿ ಸಂಬಳ ನೀಡದೆ ಸತಾಯಿಸುತ್ತಿರುವ ತಾಲೂಕ ಅಧಿಕಾರಿ ಅಂಬವ್ವ ವಿರುದ್ಧ ಕ್ರಮ ಸೂಕ್ತ ಕಾನೂನು ಕ್ರಮ ಜರುಗಿಸಿ, ನಮಗೆ ವೇತನ ನೀಡಿ. ಒಂದು ವಾರದೊಳಗೆ ನಮ್ಮ ಖಾತೆಗೆ ಸಂಬಳ ಪಾವತಿ ಆಗದಿದ್ದರೆ, ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಲ್ಲೇಶ್ ಮಚನೂರು ವಕೀಲರು, ಹಾಸ್ಟೆಲ್ ಅಡಿಗೆ ಕಾರ್ಮಿಕರು ಲಕ್ಷ್ಮಿ ಜ್ಯೋತಿ, ರಸುಲ್ಬಿ ಗಂಗಮ್ಮ ಸೇರಿದಂತೆ ಅನೇಕ ಮಹಿಳಾ ಭಾಗವಹಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka