ಕೊಟ್ಟಿಗೆಹಾರ ಅಜಾದ್ ನಗರ ಬಳಿ ಅಪಘಾತ ವಲಯದ ಎರಡು ತಿರುವುಗಳನ್ನು ನೇರ ಮಾಡುವಂತೆ ಸಾರ್ವಜನಿಕರ ಆಗ್ರಹ - Mahanayaka
12:46 AM Saturday 23 - August 2025

ಕೊಟ್ಟಿಗೆಹಾರ ಅಜಾದ್ ನಗರ ಬಳಿ ಅಪಘಾತ ವಲಯದ ಎರಡು ತಿರುವುಗಳನ್ನು ನೇರ ಮಾಡುವಂತೆ ಸಾರ್ವಜನಿಕರ ಆಗ್ರಹ

kottigehara
18/10/2023


Provided by

ಕೊಟ್ಟಿಗೆಹಾರ: ಕೊಟ್ಟಿಗೆಹಾರದಿಂದ ಚಾರ್ಮಾಡಿ ಘಾಟ್ ಗೆ ಹೋಗುವ ಅಜಾದ್ ನಗರದ ಕೊಗಳತೆಯ ಅಂತರದಲ್ಲಿ ಎರಡು ಅಪಘಾತ ಸಂಭವಿಸುವ ತಿರುವುಗಳಿದ್ದು ಅಲ್ಲಿ ಅನೇಕ ವಾಹನ ಅಪಘಾತಗಳು ನಡೆದಿದ್ದು ಹಲವರು ಗಾಯಗೊಂಡಿದ್ದಾರೆ. ಹಲವರು ಪ್ರಾಣ ಕಳೆದುಕೊಂಡಿದ್ದಾರೆ.

ಚಾರ್ಮಾಡಿ ಘಾಟ್ ಭಾಗದಿಂದ ಕೊಟ್ಟಿಗೆಹಾರಕ್ಕೆ ಬರುವಾಗ ನೇರ ಇಳಿಜಾರು ರಸ್ತೆಯಿದ್ದು ಬರುವ ವಾಹನಗಳು ಹೋಟೆಲ್ ಬಳಿ ತಿರುವಿನಲ್ಲಿ ಮುಗ್ಗರಿಸಿ ಪಲ್ಟಿ ಹೊಡೆಯುತ್ತಿವೆ.ಇದರಿಂದ ಅನೇಕ ಪ್ರವಾಸಿಗರು ಅಪಘಾತಕ್ಕೀಡಾಗಿದ್ದಾರೆ.ಕೊಟ್ಟಿಗೆಹಾರದಿಂದ 50ಮೀ ಅಂತರದ ಎರಡು ತಿರುವುಗಳು ಜನರ ಪಾಲಿನ ಮೃತ್ಯುಕೂಪಗಳಾಗಿವೆ.

ಇತ್ತೀಚೆಗೆ ಗ್ಯಾಸ್ ಲಾರಿ ಹಾಗೂ ಎಳನೀರು ಲಾರಿ ಅಪಘಾತವಾಗಿತ್ತು. ಈ ಹಿಂದೆ ಹಲವು ದ್ವಿಚಕ್ರ ಸವಾರರು, ಹಲವು ಪ್ರವಾಸಿಗರು ಈ ನೇರ ರಸ್ತೆಯಲ್ಲಿ ವೇಗವಾಗಿ ಬಂದು ರಸ್ತೆಯ ಕೊನೆಯಲ್ಲಿ ಹಿಮ್ಮರಿ ತಿರುವು ತರಹ ತಿರುವು ಇರುವುದರಿಂದ ದರ್ಬಾರ್ ಹೋಟೆಲ್ ಬಳಿ ಹಾಗೂ ತರುವೆ ಗ್ರಾಮಕ್ಕೆ ತಿರುಗುವ ರಸ್ತೆ ಬಳಿ ತಿರುವುಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತಿರುವುಗಳನ್ನು ನೇರ ಮಾಡಿ ಅಪಘಾತ ತಪ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


‘ಕೊಟ್ಟಿಗೆಹಾರದ ಬಳಿ ಎರಡು ಅಪಾಯದ ತಿರುವುಗಳಿದ್ದು ಅನೇಕ ಅಪಘಾತ ಸಂಭವಿಸಿವೆ.ಕೊಟ್ಟಿಗೆಹಾರ ತಲುಪುವ ಮುನ್ನವೇ ಜನರು ಪ್ರಾಣಾಪಾಯ ಸಂಭವಿಸುತ್ತಿದೆ.ಸಂಬಂಧಿಸಿದ ಅಧಿಕಾರಿಗಳು ತಿರುವುಗಳ ಬಗ್ಗೆ ಸೂಕ್ತ ಗಮನ ಹರಿಸಬೇಕು’

–ಸಂಜಯ್ ಗೌಡ, ಸಮಾಜ ಸೇವಕ, ಕೊಟ್ಟಿಗೆಹಾರ


ಇದನ್ನೂ ಓದಿ:

ಮಳೆ, ಮಂಜು ಎಫೆಕ್ಟ್:  ಗ್ಯಾಸ್ ಲಾರಿ — ಎಳನೀರು ತುಂಬಿದ ಲಾರಿ ನಡುವೆ ಅಪಘಾತ

ರಿಕ್ಷಾ ಚಾಲಕನಿಗೆ ಮಹಿಳೆಯಿಂದ ಲೈಂಗಿಕ ಕಿರುಕುಳ: ವಿಡಿಯೋ ವೈರಲ್

ಇತ್ತೀಚಿನ ಸುದ್ದಿ