ಹೊಗೆನಕಲ್ ಜಲಪಾತದ ಹಿನ್ನೀರಿನಲ್ಲಿ ತೆಪ್ಪಗಳ ರೇಸ್ - Mahanayaka

ಹೊಗೆನಕಲ್ ಜಲಪಾತದ ಹಿನ್ನೀರಿನಲ್ಲಿ ತೆಪ್ಪಗಳ ರೇಸ್

rase
09/06/2023

ಚಾಮರಾಜನಗರ: ಭಾರತದ ನಯಾಗರ ಎಂದೇ ಪ್ರಸಿದ್ಧವಾಗಿರುವ ಕರ್ನಾಟಕ ಹಾಗೂ ತಮಿಳುನಾಡಿನ ಎರಡೂ ಗಡಿ ಹಂಚಿಕೊಂಡಿರುವ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೊಗೆನಕಲ್ ಜಲಪಾತದ ಹಿನ್ನೀರಿನಲ್ಲಿ ತೆಪ್ಪಗಳ ರೇಸ್ ನಡೆದಿದೆ.

ಊಟುಮಲೈ ಎಂಬ ಗ್ರಾಮಸ್ಥರು ಮಾರಿಯಮ್ಮನ ಹಬ್ಬದ ಪ್ರಯುಕ್ತ ಈ ರೇಸ್ ನಡೆಸಿದ್ದು ರೇಸ್ ನಲ್ಲಿ 8–10 ತೆಪ್ಪಗಳು ಭಾಗಿಯಾಗಿವೆ. ಒಂದು ತೆಪ್ಪದಲ್ಲಿ ಇಬ್ಬರು ಕುಳಿತು 100 ಮೀ ರೇಸ್ ನಡೆದಿದ್ದು ಗೆದ್ದವರಿಗೆ ಚಿನ್ನಾಭರಣವನ್ನು ಬಹುಮಾನವಾಗಿ ಕೊಡಲಾಗಿದೆ.

ಮೊದಲ ಬಹುಮಾನವನ್ನು ಪೆರುಮಾಳ್- ಮಯಿಲ್, ಎರಡನೇ ಬಹುಮಾನವಾದ 2 ಗ್ರಾಂ ಚಿನ್ನವನ್ನು ಶ್ರೀನಿ- ಪೆರುಮಾಳ್ ಹಾಗೂ 3 ನೇ ಬಹುಮಾನವಾದ 8 ಸಾವಿರ ಹಣವನ್ನು ಸತೀಶ್- ಕರುಪ್ಪನ್ ಎಂಬವರು ಪಡೆದಿದ್ದಾರೆ. ಭೋರ್ಗರೆದು ಉಕ್ಕಿ ಹರಿಯುವ ಕಾವೇರಿಯಲ್ಲಿ ರೋಮಾಂಚಕ ರೇಸ್ ನಡೆದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ