ಕುಂಭದ್ರೋಣ ಮಳೆ: ದುಬೈಯನ್ನು ಮುಳುಗಿಸಿದ ವರುಣನ‌ ಆರ್ಭಟಕ್ಕೆ ಸೆಲೆಬ್ರಿಟಿಗಳು ಹೈರಾಣು - Mahanayaka

ಕುಂಭದ್ರೋಣ ಮಳೆ: ದುಬೈಯನ್ನು ಮುಳುಗಿಸಿದ ವರುಣನ‌ ಆರ್ಭಟಕ್ಕೆ ಸೆಲೆಬ್ರಿಟಿಗಳು ಹೈರಾಣು

18/04/2024


Provided by

ದುಬೈಯನ್ನು ಮುಳುಗಿಸಿದ ಮಳೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಸಂಖ್ಯ ಮಂದಿ ತಮ್ಮ ಅನುಭವಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಮಳೆ ಜನಸಾಮಾನ್ಯರನ್ನು ಮಾತ್ರ ಕಾಡಿದ್ದಲ್ಲ, ಸೆಲೆಬ್ರಿಟಿಗಳನ್ನೂ ಹೈರಾಣಗಿಸಿದೆ ಅನ್ನೋದಕ್ಕೆ ಗಾಯಕ ರಾಹುಲ್ ವೈದ್ಯ ಅವರು ಹಂಚಿಕೊಂಡ ವಿಡಿಯೋ ಮತ್ತು ಫೋಟೋಗಳು ಸಾಕ್ಷಿಯಾಗಿವೆ.

ಕೈಯಲ್ಲಿ ಶೂ ಹಿಡ್ಕೊಂಡು ಮಂಡಿವರೆಗಿನ ನೀರಿನಲ್ಲಿ ನಡೆದು ಹೋಗುತ್ತಿರುವ ವಿಡಿಯೋವನ್ನು ರಾಹುಲ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಸತತ ಎರಡು ಗಂಟೆಯಿಂದ ಮಳೆ ಸುರಿಯುತ್ತಿದೆ. ಮಳೆಯನ್ನು ಅನುಭವಿಸಿ ಅಷ್ಟೇನೂ ಗೊತ್ತಿಲ್ಲದ ದುಬೈಯ ಪರಿಸ್ಥಿತಿಯನ್ನು ನೋಡಿ. ಟ್ಯಾಕ್ಸಿಗಳು ಕಾರುಗಳು ನೀರಿನಲ್ಲಿ ಸಿಲುಕಿಕೊಂಡಿವೆ ಎಂದು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವರು ಬರಕೊಂಡಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ