ರೈಲ್ವೇ ಇಲಾಖೆಯಲ್ಲಿ ವಿವಿಧ ಹುದ್ದೆಗಳು: ವಾಟ್ಸಾಪ್ ನಲ್ಲಿಯೂ ಅಪ್ಲೈ ಮಾಡಬಹುದು - Mahanayaka

ರೈಲ್ವೇ ಇಲಾಖೆಯಲ್ಲಿ ವಿವಿಧ ಹುದ್ದೆಗಳು: ವಾಟ್ಸಾಪ್ ನಲ್ಲಿಯೂ ಅಪ್ಲೈ ಮಾಡಬಹುದು

railway recruitment
06/05/2021

ಉದ್ಯೋಗ ವಾರ್ತೆ: ಈಶಾನ್ಯ ಗಡಿನಾಡು ರೈಲ್ವೇ ವಿಭಾಗವು  ಡಾಟಾ ಎಂಟ್ರಿ, ನರ್ಸಿಂಗ್ ಸ್ಟಾಪ್, ಲ್ಯಾಬ್ ಟೆಕ್ನಿಷಿಯನ್ ಮತ್ತಿರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಮೇ 15ರೊಳಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಲುಮ್ಡಿಂಗ್ ವಿಭಾಗ/ ಎನ್.ಎಫ್.ರೈಲ್ವೆ ವಿಭಾಗ, ವಿಭಾಗೀಯ ಆಸ್ಪತ್ರೆ/ ಲುಮ್ಡಿಂಗ್ ಎನ್.ಎಫ್. ನಲ್ಲಿ ಗುತ್ತಿಗೆ ಆಧಾರದಲ್ಲಿ  ಗ್ರೂಪ್ ‘ಸಿ’        ನಲ್ಲಿ ಹೆಚ್ಚುವರಿ ಪ್ಯಾರಾಮೆಡಿಕಲ್ ಸಿಬ್ಬಂದಿಯನ್ನು  ನೇಮಿಸಿಕೊಳ್ಳಲು ನಿರ್ಧರಿಸಲಾಗಿದ್ದು, ಈ ಗುತ್ತಿಗೆಯಡಿ ಒಪ್ಪಂದದ ದಿನಾಂಕದಿಂದ ಭಾನುವಾರವೂ ಸೇರಿದಂತೆ 3 ತಿಂಗಳ ಅವಧಿಯನ್ನು ಒಳಗೊಂಡಿದೆ. ಬಳಿಕ ರೈಲ್ವೆ ಪರಿಸ್ಥಿತಿಗೆ ತಕ್ಕಂತೆ ಈ ಅವಧಿಯನ್ನು ವಿಸ್ತರಿಸಬಹುದು ಎಂದು ಅಧಿಸೂಚನೆ ತಿಳಿಸಿದೆ.

ಕೊವಿಡ್ ಹಿನ್ನೆಲೆಯಲ್ಲಿ ವಿಭಾಗೀಯ ರೈಲ್ವೆ ಆಸ್ಪತ್ರೆಗಳಲ್ಲಿ (ಲುಮ್ಡಿಂಗ್ ವಿಭಾಗ) ಪರಿಣಾಮಕಾರಿ ಚಿಕಿತ್ಸೆಯನ್ನು ಒದಗಿಸುವ ನಿಟ್ಟಿನಲ್ಲಿ ಎಲ್ ಎಂ ಬಿ ವಿಭಾಗದಲ್ಲಿ ಕೆಲಸ ವಿಭಾಗದಲ್ಲಿ ವ್ಯಾಕ್ಸಿನೇಷನ್ ನ ಮೊಬೈಲ್ ತಂಡದ ಅಡಿಯಲ್ಲಿ ಹಾಗೂ ಕೊವಿಡ್ ತಪಾಸಣಾ ಕೇಂದ್ರದಲ್ಲಿ ಕೆಲಸ ಮಾಡುವ ಅಭ್ಯರ್ಥಿಗಳೀಗೆ ಆನ್ ಲೈನ್ ಸಂದರ್ಶನ ಕರೆಯಲಾಗಿದೆ.

ಈ ಮೇಲೆ ನೀಡಲಾಗಿರುವ ಕೆಲಸಗಳನ್ನು ಮಾಡಲು ಅರ್ಹತೆ, ಅನುಭವ, ನಿಯಮಗಳು ಮತ್ತು. ಷರತ್ತುಗಳನ್ನು ಪೂರೈಸುವವರನ್ನು ಸಿಎಂಎಸ್/ಲುಮ್ಡಿಂಗ್/ ಎನ್ ಎಫ್ ರೈಲ್ವೆ ಅಡಿಯಲ್ಲಿ ಪೂರ್ಣ ಸಮಯದ ಒಪ್ಪಂದದ ಆಧಾರದಲ್ಲಿ ನೇಮ ಮಾಡಿಕೊಳ್ಳಲಾಗುವುದು.

ವಿಭಾಗೀಯ ರೈಲ್ವೆ ಆಸ್ಪತ್ರೆ, ಲುಮ್ಡಿಂಗ್ ವಿಭಾಗ ಹಾಗೂ ಎನ್ ಎಫ್ ರೈಲ್ವೆನಲ್ಲಿ ಖಾಲಿ ಇರುವ 15 ಪ್ಯಾರಾಮೆಡಿಕಲ್ ಸಿಬ್ಬಂದಿ ಹುದ್ದೆಗಳಿವೆ. 6 ನರ್ಸ್ ಹುದ್ದೆಗಳಿವೆ. 2 ಲ್ಯಾಬ್ ಟೆಕ್ನೀಷಿಯನ್ , 6  ಆಸ್ಪತ್ರೆ ಅಟೆಂಡರ್ ಹಾಗೂ 1  ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳು ಗೂಗಲ್ ಫಾರ್ಮ್ ಅಥವಾ ವಾಟ್ಸಾಪ್  ಮೂಲಕ  ಅರ್ಜಿ ಸಲ್ಲಿಸಬಹುದಾಗಿದ್ದು,  ಮೇಲೆ 15ರ ಸಂಜೆಯೊಳಗೆ  ಅರ್ಜಿ ಸಲ್ಲಿಸಬಹುದಾಗಿದೆ.  ಹಾರ್ಡ್ ಪ್ರತಿಗಳಲ್ಲಿ ಕಳುಹಿಸುವ ಯಾವುದೇ ಅರ್ಜಿ ಸ್ವೀಕರಿಸುವುದಿಲ್ಲ.  ಅರ್ಜಿ ಸಲ್ಲಿಸುವವರು ಈ ಕೆಳಗಿನ ವಿವರಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ  https://nfr.indianrailways.gov.in/cris//uploads/files/1619768635233-CPMS%20Notification%202021%20CMS.pdf ಈ ಲಿಂಕ್ ಕ್ಲಿಕ್ ಮಾಡಿ.

 

ಇತ್ತೀಚಿನ ಸುದ್ದಿ