ಮಳೆ, ಮಂಜು ಎಫೆಕ್ಟ್:  ಗ್ಯಾಸ್ ಲಾರಿ - ಎಳನೀರು ತುಂಬಿದ ಲಾರಿ ನಡುವೆ ಅಪಘಾತ - Mahanayaka

ಮಳೆ, ಮಂಜು ಎಫೆಕ್ಟ್:  ಗ್ಯಾಸ್ ಲಾರಿ — ಎಳನೀರು ತುಂಬಿದ ಲಾರಿ ನಡುವೆ ಅಪಘಾತ

chikkamagaluru
16/10/2023


Provided by

ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗಾರ ಸುತ್ತಮುತ್ತ ಸೋಮವಾರ ಮೂರು ಗಂಟೆಯಿಂದ ಮಳೆ ಹಾಗೂ ಮಂಜು ಮುಸುಕಿನ ವಾತಾವರಣದಿಂದ ಕೊಟ್ಟಿಗೆಹಾರದ ಹೋಟೆಲ್ ದರ್ಬಾರ್ ಬಳಿ ಗ್ಯಾಸ್ ಲಾರಿ ಹಾಗೂ ಎಳನೀರು ತುಂಬಿದ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಎಳನೀರು ಲಾರಿ ರಸ್ತೆಗೆ ಪಲ್ಟಿಯಾಗಿದೆ.

ಮೂಡಿಗೆರೆ ಕಡೆಯಿಂದ ಎಳನೀರು ಲಾರಿ ಮಂಗಳೂರು ಕಡೆಯಿಂದ ಬರುತ್ತಿದ್ದ ಗ್ಯಾಸ್ ಲಾರಿಗೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಎಳನೀರು ಲಾರಿ ರಸ್ತೆಗೆ ಪಲ್ಟಿಯಾಗಿ ಎಳನೀರು ರಸ್ತೆಯ ಬದಿಗೆ ಬಿದ್ದಿವೆ.

ಘಟನೆಯಲ್ಲಿ  ಎರಡೂ ವಾಹನದ ಚಾಲಕರಿಗೆ ಗಾಯವಾಗಿದ್ದು ಅವರನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಅಪಘಾತದಿಂದ ಎರಡು ಗಂಟೆಗೂ ಅಧಿಕ ಕಾಲ ಸಂಚಾರ ದಟ್ಟಣೆ ಉಂಟಾಗಿ ಕಿ.ಮೀ. ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಬಣಕಲ್ ಪೊಲೀಸ್ ಹಾಗೂ ಸ್ಥಳೀಯರು ಮಳೆಯ ನಡುವೆಯೂ ಸುಗಮ ಸಂಚಾರಕ್ಕೆ ಹರ ಸಾಹಸ ಪಡುತ್ತಿದ್ದ ದೃಶ್ಯ ಕಂಡು ಬಂತು

ಇತ್ತೀಚಿನ ಸುದ್ದಿ