ಬಾಲಕಿಯ ನೀರಿನ ಬಾಟಲಲ್ಲಿ ಮೂತ್ರ: ರಣಾಂಗಣವಾಯಿತು ರಾಜಸ್ಥಾನದ ಈ ಹಳ್ಳಿ..! - Mahanayaka
11:18 PM Friday 19 - December 2025

ಬಾಲಕಿಯ ನೀರಿನ ಬಾಟಲಲ್ಲಿ ಮೂತ್ರ: ರಣಾಂಗಣವಾಯಿತು ರಾಜಸ್ಥಾನದ ಈ ಹಳ್ಳಿ..!

31/07/2023

ರಾಜಸ್ಥಾನದ ಹಳ್ಳಿಯೊಂದರಲ್ಲಿ ಕೆಲವು ಶಾಲಾ ವಿದ್ಯಾರ್ಥಿಗಳು ಬಾಲಕಿಯ ನೀರಿನ ಬಾಟಲಿಗೆ ಮೂತ್ರವನ್ನು ತುಂಬಿಸಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಹುಡುಗರು ತಮ್ಮ ಸಹಪಾಠಿಯ ಬ್ಯಾಗ್‌ ನೊಳಗೆ ಪ್ರೇಮ ಪತ್ರವನ್ನೂ ಹಾಕಿದ್ದಾರೆ. ಇದರಿಂದ ಕೋಪಗೊಂಡ ಗ್ರಾಮಸ್ಥರು ಬಾಲಕನ ಮನೆಗೆ ನುಗ್ಗಿದ್ದಾರೆ. ಈ ವೇಳೆ ತಡೆದ ಪೊಲೀಸರ ಮೇಲೆಯೂ ಹಲ್ಲೆ ನಡೆದಿದೆ. ನಂತರ ಪೊಲೀಸರು ಲಾಠಿ ಚಾರ್ಜ್ ಮಾಡಿ ಪ್ರತಿಭಟನಾಕಾರರನ್ನು ಚದುರಿಸಿದರು.

ಕೆಲವು ಪುರುಷರು ದೊಣ್ಣೆಗಳನ್ನು ಹಿಡಿದು ನಿಂತಿದ್ದ ದೃಶ್ಯ ಕಂಡು ಬಂತು. ಪೊಲೀಸರ ತಂಡ ಈ ಗುಂಪನ್ನು ಚದುರಿಸಲು ಪ್ರಯತ್ನಿಸುತ್ತಿರುವುದು ಕಂಡುಬಂತು. ಸರ್ಕಾರಿ ಹಿರಿಯ ಪ್ರೌಢಶಾಲೆಯ ವಿದ್ಯಾರ್ಥಿನಿಯು ತರಗತಿಯಲ್ಲಿ ತನ್ನ ಬ್ಯಾಗ್ ಮತ್ತು ಬಾಟಲಿಯನ್ನು ಬಿಟ್ಟು ಊಟಕ್ಕೆಂದು ತನ್ನ ಮನೆಗೆ ಹೋಗಿದ್ದಳು. ಅವಳು ಹಿಂತಿರುಗಿ ಬಾಟಲಿಯಿಂದ ಕುಡಿಯುತ್ತಿದ್ದಾಗ ದುರ್ವಾಸನೆ ಬಂತು. ಕೆಲವು ಹುಡುಗರು ಬಾಟಲಿಯಲ್ಲಿ ಮೂತ್ರ ಬೆರೆಸಿದ್ದಾರೆ ಎಂದು ಪತ್ತೆಯಾಯಿತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಘನಶ್ಯಾಮ್ ಶರ್ಮಾ ಹೇಳಿದ್ದಾರೆ.

ಈ ಬಗ್ಗೆ ಬಾಲಕಿ ಪ್ರಾಂಶುಪಾಲರಿಗೆ ದೂರು ನೀಡಿದ್ದು, ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಇಂದು ಶಾಲೆ ತೆರೆದಾಗ ತಹಶೀಲ್ದಾರ್, ಲುಹಾರಿಯಾ ಪೊಲೀಸ್ ಠಾಣೆಯ ಉಸ್ತುವಾರಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರ ಬಳಿ ಸಮಸ್ಯೆ ತೋಡಿಕೊಂಡರು. ಆದರೆ, ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದ ಕಾರಣ ಗ್ರಾಮಸ್ಥರು ಬಾಲಕರ ಜಾಗಕ್ಕೆ ನುಗ್ಗಿ ಕಲ್ಲು ತೂರಾಟ ನಡೆಸಿದರು.

ಬಾಲಕಿ ಪೊಲೀಸರಿಗೆ ಔಪಚಾರಿಕವಾಗಿ ದೂರು ನೀಡದ ಕಾರಣ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಪ್ರತಿಭಟನೆಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ ಎಂದು ಎನ್​​ ಡಿಟಿವಿ ವರದಿ ಮಾಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ