ಗ್ರೀನ್ ಸಿಗ್ನಲ್: ಲೋಕಸಭೆ ಆಯ್ತು, ರಾಜ್ಯಸಭೆಯಲ್ಲೂ ಸಿಕ್ತು ಹಸಿರುನಿಶಾನೆ; ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಪರವಾದ 215 ಮತಗಳು ಅಂಗೀಕಾರ - Mahanayaka
8:20 AM Sunday 14 - September 2025

ಗ್ರೀನ್ ಸಿಗ್ನಲ್: ಲೋಕಸಭೆ ಆಯ್ತು, ರಾಜ್ಯಸಭೆಯಲ್ಲೂ ಸಿಕ್ತು ಹಸಿರುನಿಶಾನೆ; ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಪರವಾದ 215 ಮತಗಳು ಅಂಗೀಕಾರ

21/09/2023

ಐತಿಹಾಸಿಕ ಬೆಳವಣಿಗೆಯೊಂದರಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆ ಸರ್ವಾನುಮತದಿಂದ ಅಂಗೀಕರಿಸಿದ ಒಂದು ದಿನದ ನಂತರ ಈ ಮಸೂದೆಯನ್ನು ರಾಜ್ಯಸಭೆಯು ಗುರುವಾರ ಸಂಪೂರ್ಣ ಬಹುಮತದಿಂದ ಅಂಗೀಕರಿಸಿದೆ. ಮೇಲ್ಮನೆಯಲ್ಲಿ ಈ ನಿರ್ಣಯದ ಪರವಾಗಿ 215 ಸಂಸದರು ಮತ ಚಲಾಯಿಸಿದರು. ವಿರುದ್ಧವಾಗಿ ಯಾರೂ ಮತ ಚಲಾಯಿಸಲಿಲ್ಲ.


Provided by

ಇದಕ್ಕೂ ಮೊದಲು ಎಲ್ಲಾ ರಾಜ್ಯಸಭಾ ಸಂಸದರು – ಪಕ್ಷಾತೀತವಾಗಿ ಈ ಮಸೂದೆಯನ್ನು ಮೌಖಿಕವಾಗಿ ಬೆಂಬಲಿಸಿದರು. ಆದರೆ ಕೆಲವು ವಿರೋಧ ಪಕ್ಷದ ಸದಸ್ಯರು ಇದನ್ನು “ಚುನಾವಣಾ ಗಿಮಿಕ್” ಎಂದು ಕರೆದರು.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿಯನ್ನು ಅಧಿಕೃತಗೊಳಿಸಲು ಈಗ ರಾಷ್ಟ್ರಪತಿಗಳ ಸಹಿ ಅಗತ್ಯವಿದೆ.
ರಾಜ್ಯಸಭೆಯಲ್ಲಿ ಮತದಾನಕ್ಕೂ ಮುನ್ನ ಮಾತನಾಡಿದ ಪ್ರಧಾನಿ ಮೋದಿ, ‘ಈ ಮಸೂದೆಯು ದೇಶದ ಜನರಲ್ಲಿ ಹೊಸ ವಿಶ್ವಾಸಕ್ಕೆ ಕಾರಣವಾಗುತ್ತದೆ. ಎಲ್ಲಾ ಸದಸ್ಯರು ಮತ್ತು ರಾಜಕೀಯ ಪಕ್ಷಗಳು ಮಹಿಳಾ ಸಬಲೀಕರಣ ಮತ್ತು ‘ನಾರಿ ಶಕ್ತಿ’ಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ನಾವು ದೇಶಕ್ಕೆ ಬಲವಾದ ಸಂದೇಶವನ್ನು ನೀಡೋಣ’ ಎಂದರು.

ಲೋಕಸಭೆಯಲ್ಲಿ ಬುಧವಾರ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿರುವುದನ್ನು ‘ಭಾರತದ ಸಂಸದೀಯ ಪ್ರಯಾಣದ ಸುವರ್ಣ ಕ್ಷಣ’ ಎಂದು ಉಲ್ಲೇಖಿಸಿದ ಪ್ರಧಾನಿ ಮೋದಿ, ಈ ಸಾಧನೆಗೆ ಎಲ್ಲಾ ಪಕ್ಷಗಳ ಸದಸ್ಯರು ಮತ್ತು ಅವರ ನಾಯಕರನ್ನು ಶ್ಲಾಘಿಸಿದರು.

ಲೋಕಸಭೆಯಲ್ಲಿ ಸಂವಿಧಾನ (ನೂರ ಇಪ್ಪತ್ತೆಂಟನೇ ತಿದ್ದುಪಡಿ) ಮಸೂದೆ – 2023 ಕ್ಕೆ ಸಂಬಂಧಿಸಿದಂತೆ ಬೆಂಬಲ ಮತ್ತು ಅರ್ಥಪೂರ್ಣ ಚರ್ಚೆಗೆ ಬೆಂಬಲ ನೀಡಿದ ಎಲ್ಲಾ ರಾಜಕೀಯ ಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸದನದ ನಾಯಕ ಇಂದು ಧನ್ಯವಾದ ಅರ್ಪಿಸಿದರು.

ಇತ್ತೀಚಿನ ಸುದ್ದಿ