ಮೂಡಿಗೆರೆ ಅರಣ್ಯದಲ್ಲಿ ರಾಲಿ: ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗೆ ಮನವಿ

ಮೂಡಿಗೆರೆ: ತಾಲ್ಲೂಕಿನ ಭೈರಾಪುರ ವ್ಯಾಪ್ತಿಯ ಎತ್ತಿನಭುಜ, ಬಾಳೂರು ಮೀಸಲು ಅರಣ್ಯದ ಹಾದಿಯಲ್ಲಿ ಮೋಟಾರು ವಾಹನಗಳ ರಾಲಿ ನಡೆದಿದ್ದು,ಯಾವುದೇ ಅನುಮತಿ ಪಡೆಯದೆ ಅಲ್ಲಿ ಗುಂಪುಗೂಡಿ ಪರಿಸರ ನಾಶ, ಸೇರಿದಂತೆ ಅಲ್ಲಿನ ಪ್ರಶಾಂತ ವಾತಾವರಣಕ್ಕೆ ಧಕ್ಕೆ ತರಲಾಗಿದೆ ಈ ಬಗ್ಗೆ ತಕ್ಷಣವೇ ಕ್ರಮಕೈಗೊಳ್ಳುವಂತೆ ಪರಿಸರ ಪ್ರೇಮಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಆನೆ ಕಾರಿಡಾರ್ ವ್ಯಾಪ್ತಿಯಲ್ಲಿ ರಾಲಿ ನಡೆಸಲಾಗಿದೆ. ಈಗಾಗಲೇ ಇಲ್ಲಿ ಆನೆ ಮತ್ತು ಮಾನವ ಸಂಘರ್ಷ ಮಿತಿಮೀರಿದೆ, ಇಂತಹ ಸೂಕ್ಷ್ಮ ಕಾಡಿನ ಪರಿಸರದಲ್ಲಿ ರಾಲಿ ಆಯೋಜನೆ ಮಾಡಿದವರ ವಿರುದ್ಧ ಅರಣ್ಯ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಕೂಡ ಕ್ರಮ ಕೈಗೊಳ್ಳುವಂತೆ ಆದೇಶ ಮಾಡಿದ್ದಾರೆ. ನೂರಾರು ಐಷಾರಾಮಿ ವಾಹನಗಳು ಇಲ್ಲಿ ಬಂದಿದ್ದು, ಬೆಂಗಳೂರು, ಸಕಲೇಶಪುರ, ಹಾಸನ, ತೀರ್ಥಹಳ್ಳಿ ಭಾಗಗಳಿಂದ ಜನರು ವಾಹನದೊಂದಿಗೆ ಬಂದು ಇಲ್ಲಿನ ಪರಿಸರವನ್ನು ಹಾಳು ಮಾಡಿದ್ದಾರೆ. ಈ ಸಂಬಂಧ ಜಿಲ್ಲಾ ಆಡಳಿತ, ಜಿಲ್ಲಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವುದಾಗಿ ಇದೇ ವೇಳೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮೂಡಿಗೆರೆಯ ಪರಿಸರ ಮತ್ತು ವನ್ಯಜೀವಿ ಕಾರ್ಯಕರ್ತರಾದ ವಿನೋದ್ ಕಣಚೂರು, ಪರಿಸರವಾದಿ ಯುವ ಪರಿಸರ ಲೇಖಕ, ಕಾರ್ತಿಕ್ ಆದಿತ್ಯ ಬೆಳಗೊಡ್, ವೈಲ್ಡ್ ಕೆರ್ ಸಂಸ್ಥೆಯ ಮುಖ್ಯಸ್ಥ ಮಧು ಮುಕ್ತಿಹಳ್ಳಿ, ವನ್ಯಜೀವಿ ಪರಿಪಾಲಕ ವೀರೇಶ್ ಜಿ.,ಪರಿಸರ ಕಾರ್ಯಕರ್ತರಾದ ಪ್ರದೀಪ್, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj