ದಸಂಸ ಕಾರ್ಕಳ ತಾಲೂಕು ನೂತನ ಪ್ರಧಾನ ಸಂಚಾಲಕರಾಗಿ ರಮೇಶ್ ಬಿ. ಪೆರ್ವಾಜೆ ಆಯ್ಕೆ - Mahanayaka
1:32 PM Tuesday 8 - September 2026

ದಸಂಸ ಕಾರ್ಕಳ ತಾಲೂಕು ನೂತನ ಪ್ರಧಾನ ಸಂಚಾಲಕರಾಗಿ ರಮೇಶ್ ಬಿ. ಪೆರ್ವಾಜೆ ಆಯ್ಕೆ

ramesh b
21/08/2026

ಕಾರ್ಕಳ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಅಂಬೇಡ್ಕರ್‌ವಾದ ಕಾರ್ಕಳ ಶಾಖೆಯ ಕಾರ್ಕಳ ತಾಲೂಕು ನೂತನ ಪ್ರಧಾನ ಸಂಚಾಲಕರಾಗಿ ರಮೇಶ್ ಬಿ. ಪೆರ್ವಾಜೆ ಅವರು ಅತ್ಯಂತ ಅಧಿಕ ಮತಗಳ ಬೆಂಬಲದೊಂದಿಗೆ ಆಯ್ಕೆಯಾಗಿದ್ದಾರೆ.

ಈ ಮಹತ್ವದ ಸಂಘಟನಾತ್ಮಕ ಪ್ರಕ್ರಿಯೆಯಲ್ಲಿ ಉಡುಪಿ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್, ಉಡುಪಿ ವಿಭಾಗೀಯ ಸಂಚಾಲಕರಾದ ಶ್ಯಾಮ್‌ರಾಜ್ ಭಿರ್ತಿ ಹಾಗೂ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರು ಮತ್ತು ವಕೀಲರಾದ ಟಿ. ಮಂಜುನಾಥ ಗಿಳಿಯಾರು ಅವರು ಚುನಾವಣಾ ಅಧಿಕಾರಿಯಾಗಿ ಉಪಸ್ಥಿತರಿದ್ದು, ಸಂಪೂರ್ಣ ಚುನಾವಣಾ ಪ್ರಕ್ರ ಅತಿಯನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟರು.

ಸಂಘಟನೆಯನ್ನು ತಾಲೂಕು ಮಟ್ಟದಲ್ಲಿ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯು ಅತ್ಯಂತ ಸೌಹಾರ್ದಯುತ ಹಾಗೂ ಪ್ರಜಾಸತ್ತಾತ್ಮಕವಾಗಿ ಜರುಗಿದೆ. ಆಯ್ಕೆಯಾದ ನೂತನ ಪ್ರಧಾನ ಸಂಚಾಲಕರಿಗೆ ಸಮಿತಿಯ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಶುಭ ಹಾರೈಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi