ರಂಝಾನ್: 20 ದಿನಗಳಲ್ಲಿ ಮದೀನಾಕ್ಕೆ 2 ಕೋಟಿಗಿಂತಲೂ ಅಧಿಕ ಯಾತ್ರಿಕರ ಭೇಟಿ

08/04/2024
ರಮಝಾನಿನ ಮೊದಲ 20 ದಿನಗಳಲ್ಲಿ ಮದೀನಾಕ್ಕೆ 2 ಕೋಟಿಗಿಂತಲೂ ಅಧಿಕ ಯಾತ್ರಿಕರು ಆಗಮಿಸಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಇದು ಭಾರೀ ದೊಡ್ಡ ಸಂಖ್ಯೆ ಎಂದು ಹೇಳಲಾಗಿದೆ. ಹಾಗೆಯೇ ರಮಝಾನಿನ ಕೊನೆಯ ಹತ್ತರಲ್ಲಿ ಇದಕ್ಕಿಂತಲೂ ಹೆಚ್ಚು ಯಾತ್ರಾರ್ಥಿಗಳು ಮದೀನಾಕ್ಕೆ ಭೇಟಿ ಕೊಡುವವರಿದ್ದು ಈ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಲಿದೆ ಎಂದು ಕೂಡ ಹೇಳಲಾಗಿದೆ.
ಮಸ್ಜಿದುನ್ನಬವಿಗೆ ಭೇಟಿ ಕೊಡುವುದಲ್ಲದೇ ಮಸೀದಿಯ ಸುತ್ತಮುತ್ತಲಿನ ಲೈಬ್ರರಿ ಮತ್ತು ಇತರ ಸ್ಥಳಗಳಿಗೂ ಯಾತ್ರಾರ್ಥಿಗಳು ಭೇಟಿ ನೀಡುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth