ಗಂಡ ಹೆಂಡತಿಯ ಜಗಳ ಬಿಡಿಸುವ ನೆಪದಲ್ಲಿ ಬಂದು ಪತ್ನಿಯ ಮೇಲೆ ಅತ್ಯಾಚಾರ: 6 ಮಂದಿ ಅರೆಸ್ಟ್ - Mahanayaka
8:01 AM Saturday 20 - December 2025

ಗಂಡ ಹೆಂಡತಿಯ ಜಗಳ ಬಿಡಿಸುವ ನೆಪದಲ್ಲಿ ಬಂದು ಪತ್ನಿಯ ಮೇಲೆ ಅತ್ಯಾಚಾರ: 6 ಮಂದಿ ಅರೆಸ್ಟ್

police
12/02/2024

ಗಂಗಾವತಿ: ಪತಿ—ಪತ್ನಿಯ ಜಗಳ ಬಿಡಿಸುವ ನೆಪದಲ್ಲಿ ಪತ್ನಿಯನ್ನು  ಸ್ಥಳದಿಂದ ಕರೆದೊಯ್ದು ಅತ್ಯಾಚಾರ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಗಂಗಾವತಿ ನಗರ ಪೊಲೀಸರು 6 ಮಂದಿಯನ್ನು ಶನಿವಾರ ಬಂಧಿಸಿದ್ದಾರೆ.

ಗಂಗಾವತಿ ಬಸ್ ನಿಲ್ದಾಣದಲ್ಲಿ ಪತಿ ಹಾಗೂ ಪತ್ನಿ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಡುತ್ತಿದ್ದರು. ಈ ವೇಳೆ 6 ಜನರ ಅಪರಿಚಿತರ ತಂಡ ಸ್ಥಳಕ್ಕೆ ಆಗಮಿಸಿ ಜಗಳ ಬಿಡಿಸುವ ನೆಪದಲ್ಲಿ ಪತಿಗೆ ಹಲ್ಲೆ ನಡೆಸಿದ್ದಾರೆ.

ನಂತರ ಸಂತ್ರಸ್ತ 21 ವರ್ಷದ ಮಹಿಳೆಯನ್ನು ಸ್ಥಳದಿಂದ ಬಸ್ ನಿಲ್ದಾಣದ ಉದ್ಯಾನವನಕ್ಕೆ ಕರೆದೊಯ್ದು ತಂಡದಲ್ಲಿದ್ದ ಓರ್ವ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಸದ್ಯ ಘಟನೆಗೆ ಸಂಬಂಧಿಸಿದಂತೆ ಓರ್ವನ ವಿರುದ್ಧ ಅತ್ಯಾಚಾರ ಹಾಗೂ ಇತರ ಐವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಸದ್ಯ 6 ಮಂದಿ ಆರೋಪಿಗಳನ್ನು ಪೊಲೀಸರು ಕ್ಷಿಪ್ರವಾಗಿ ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ