ರಾಷ್ಟ್ರಪತಿಗಳಿಂದಲೇ ಮುಚ್ಚಿಟ್ಟು ಪ್ರಧಾನಿ ಮೋದಿ ಈ ಕೆಲಸ ಮಾಡಿದ್ದರಂತೆ! - Mahanayaka
1:36 PM Saturday 2 - December 2023

ರಾಷ್ಟ್ರಪತಿಗಳಿಂದಲೇ ಮುಚ್ಚಿಟ್ಟು ಪ್ರಧಾನಿ ಮೋದಿ ಈ ಕೆಲಸ ಮಾಡಿದ್ದರಂತೆ!

06/01/2021

ನವದೆಹಲಿ: ಸಾವಿರ ಹಾಗೂ ಐನೂರು ಮುಖಬೆಲೆಯ ನೋಟುಗಳನ್ನು ರದ್ದು ಮಾಡುವ ವಿಷಯವನ್ನು ಅಂದು ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ ಅವರಿಂದ ಮುಚ್ಚಿಟ್ಟು ಪ್ರಧಾನಿ ಮೋದಿ ಏಕಮುಖವಾಗಿ ನಿರ್ಧಾರ ತೆಗೆದುಕೊಂಡಿದ್ದರು ಎಂದು ಪ್ರಣಬ್ ಮುಖರ್ಜಿ ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ.

2016ರ ನವೆಂಬರ್ 8ರಂದು ಪ್ರಧಾನಿ ನರೇಂದ್ರ  ಮೋದಿ ಅವರು ನೋಈಟು ಬ್ಯಾನ್ ನ ವಿಷಯ ಘೋಷಣೆ ಮಾಡಿದ ಬಳಿಕವೇ ತನಗೆ ತಿಳಿದಿದೆ. ವಿರೋಧ ಪಕ್ಷಗಳ ಜೊತೆಗೆ ನೋಟು ಬ್ಯಾನ್ ನ ವಿಚಾರ ಪ್ರಸ್ತಾಪಿಸಿದ್ದರೆ, ಅದಕ್ಕೆ ಯಾವುದೇ ಮಹತ್ವ ಇರುತ್ತಿರಲಿಲ್ಲ ಎಂದು ಪ್ರಣಬ್ ಮುಖರ್ಜಿ ತಮ್ಮ ಆತ್ಮಚರಿತ್ರೆ ದಿ ಪ್ರೆಸಿಡೆನ್ಸಿಯಲ್ ಇಯರ್ಸ್: 2012 -2017ನಲ್ಲಿ ಬರೆದಿದ್ದಾರೆ.

2015 ರ ಕ್ರಿಸ್ಮಸ್ ದಿನ ಪ್ರಧಾನಿ ನರೇಂದ್ರ ಮೋದಿ ಲಾಹೋರ್ ಗೆ ದಿಢೀರ್ ಭೇಟಿ ನೀಡಿ, ಪಾಕ್ ಪ್ರಧಾನಿ ನವಾಜ್ ಷರೀಫ್ ಅವರಿಗೆ ಜನ್ಮದಿನದ ಶುಭಾಶಯ ಹೇಳುವ ಅಗತ್ಯವಿರಲಿಲ್ಲ ಎಂದು ಪ್ರಣಬ್ ತಿಳಿಸಿದ್ದಾರೆ. ಮೋದಿಯವರ ನಡೆ ಅನಗತ್ಯವಾಗಿತ್ತು. ಅವರಿಗೆ ವಿದೇಶಾಂಗ ನೀತಿಯ ಅರಿವಿಲ್ಲ ಎಂದು ಅವರು ಹೇಳಿದ್ದರು.

ಇತ್ತೀಚಿನ ಸುದ್ದಿ