ರಸ್ತೆ ಬದಿಯಲ್ಲಿ ತಾಯಿಯ ಕಪಾಳಕ್ಕೆ ಹೊಡೆದು ಹತ್ಯೆ ಮಾಡಿದ ಪುತ್ರ; ವಿಡಿಯೋ ವೈರಲ್ - Mahanayaka
11:45 PM Thursday 16 - October 2025

ರಸ್ತೆ ಬದಿಯಲ್ಲಿ ತಾಯಿಯ ಕಪಾಳಕ್ಕೆ ಹೊಡೆದು ಹತ್ಯೆ ಮಾಡಿದ ಪುತ್ರ; ವಿಡಿಯೋ ವೈರಲ್

17/03/2021

ನವದೆಹಲಿ: ತನ್ನ ಪತ್ನಿಯ ಜೊತೆಗೆ ಜಗಳವಾಡಿದಳು ಎಂದು ತನ್ನ  ತಾಯಿಯನ್ನು ರಸ್ತೆ ಬದಿಯಲ್ಲಿಯೇ  ಹೊಡೆದು ಯತ್ಯೆ ಮಾಡಿದ ಘಟನೆ ದೆಹಲಿಯ ದ್ವಾರಕಾದಲ್ಲಿ ನಡೆದಿದ್ದು, ಈ ಸಂಬಂಧ ವಿಡಿಯೋವೊಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


Provided by

76 ವರ್ಷದ ಅವ್ತಾರ್ ಕೌರ್ ಹತ್ಯೆಗೀಡಾದ ಮಹಿಳೆಯಾಗಿದ್ದಾರೆ.  ಮಗನ ದುಷ್ಕೃತ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಸೊಸೆಯ ಜೊತೆ ಮಾತನಾಡುತ್ತಿದ್ದ ವೇಳೆಯಲ್ಲಿಯೇ ಪಕ್ಕದಲ್ಲಿ ನಿಂತುಕೊಂಡು ನೋಡುತ್ತಿದ್ದ ದುಷ್ಟ ಮಗ ಬಲವಾಗಿ ಕೈ ಬೀಸಿ ವೃದ್ಧೆಯ ಕೆನ್ನೆಗೆ ಹೊಡೆದಿದ್ದಾನೆ. ಈ ಒಂದೇ ಏಟಿಗೆ ಸ್ಥಳದಲ್ಲಿಯೇ ಕುಸಿದು ಬಿದ್ದು ವೃದ್ಧೆ ಸಾವನ್ನಪ್ಪಿದ್ದಾರೆ. ವೃದ್ಧೆ ನೆಲಕ್ಕೆ ಬೀಳುತ್ತಿದ್ದಂತೆಯೇ ಯಾವುದೇ ಚಲನೆ ಇಲ್ಲದೇ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ಸಂದರ್ಭ ಸೊಸೆ ಅತ್ತೆಯನ್ನು ಎಬ್ಬಿಸಲು ಪ್ರಯತ್ನಿಸಿದ್ದಾಳೆ.  ಬಳಿಕ ವೃದ್ಧೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅದಾಗಲೇ ವೃದ್ಧ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಘಟನೆ ಸಂಬಂಧ ಬಿಂದಾಪುರ ಪೊಲೀಸರು ಪಾಪಿ ಪುತ್ರ  45 ವರ್ಷ ವಯಸ್ಸಿನ ರಣಬೀರ್ ವಿರುದ್ಧ ಪ್ರಕರಣ ದಾಖಲಿಸಿದ್ದು, ನರಹತ್ಯೆ ಪ್ರಕರಣದಡಿಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆಯ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಭಯಾನಕವಾಗಿದೆ.

https://twitter.com/PunYaab/status/1371903917815042048?s=20

ಇತ್ತೀಚಿನ ಸುದ್ದಿ