ವಿಚಿತ್ರ: ವಶಪಡಿಸಿಕೊಂಡ 19 ಕೆಜಿ ಗಾಂಜಾವನ್ನು ಇಲಿಗಳು ತಿಂದಿದೆ ಎಂದ ಪೊಲೀಸರು; ನ್ಯಾಯಾಧೀಶರು ಕಕ್ಕಾಬಿಕ್ಕಿ..!

ವ್ಯಕ್ತಿಯೊಬ್ಬನಿಂದ ವಶಪಡಿಸಿಕೊಂಡ ನಂತರ ಗೋದಾಮಿನಲ್ಲಿ ಇರಿಸಲಾಗಿದ್ದ ಹತ್ತು ಕೆಜಿ ಗಾಂಜಾ ಮತ್ತು ಒಂಬತ್ತು ಕಿಲೋಗ್ರಾಂ ‘ಭಾಂಗ್’ ಅನ್ನು ಇಲಿಗಳು ತಿಂದಿವೆ ಎಂದು ಜಾರ್ಖಂಡ್ ನ ಧನ್ ಬಾದ್ ಪೊಲೀಸರು ನ್ಯಾಯಾಲಯಕ್ಕೆ ವರದಿ ನೀಡಿದ್ದಾರೆ. ಗಾಂಜಾ ಮತ್ತು ಭಾಂಗ್ ಹೊಂದಿದ್ದಕ್ಕಾಗಿ ಶಂಭು ಅಗರ್ ವಾಲ್ ಮತ್ತು ಅವರ ಮಗನನ್ನು ಡಿಸೆಂಬರ್ 14, 2018 ರಂದು ಬಂಧಿಸಲಾಗಿತ್ತು.
ವಿಚಾರಣೆಯ ಸಮಯದಲ್ಲಿ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ರಾಮ್ ಶರ್ಮಾ ಅವರ ನ್ಯಾಯಾಲಯವು ತನಿಖಾಧಿಕಾರಿ ಜೈಪ್ರಕಾಶ್ ಪ್ರಸಾದ್ ಅವರಿಗೆ ಮುಟ್ಟುಗೋಲು ಹಾಕಿಕೊಂಡ ವಸ್ತುಗಳನ್ನು ಪ್ರದರ್ಶಿಸುವಂತೆ ನಿರ್ದೇಶನ ನೀಡಿತ್ತು.
ಆದರೆ ನ್ಯಾಯಾಲಯದ ಆದೇಶದಂತೆ ಪೊಲೀಸರಿಗೆ ವಸ್ತುಗಳನ್ನು ಹಾಜರುಪಡಿಸಲು ಸಾಧ್ಯವಾಗಲಿಲ್ಲ. ಈ ವಸ್ತುವನ್ನು ಇಲಿಗಳು ತಿಂದಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.
ವಶಪಡಿಸಿಕೊಂಡ ವಸ್ತುಗಳನ್ನು ಇಲಿಗಳು ನಾಶಪಡಿಸಿವೆ ಎಂದು ತನಿಖಾಧಿಕಾರಿ ಏಪ್ರಿಲ್ 6 ರಂದು ವರದಿ ಸಲ್ಲಿಸಿದ್ದಾರೆ.
ಇತ್ತ ಆರೋಪಿತ ಶಂಭು ಮತ್ತು ಅವರ ಮಗನ ಪರ ವಕೀಲರು ಇಂಡಿಯಾ ಟುಡೇ ಟಿವಿಗೆ ಹೇಳಿಕೆ ನೀಡಿದ್ದು, ತಮ್ಮ ಕಕ್ಷಿದಾರರ ವಿರುದ್ಧ ಸುಳ್ಳು ಕೇಸ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ವಕೀಲ ಅಭಯ್ ಭಟ್ ಅವರು ಕಾನೂನಿನ ಆಧಾರದ ಮೇಲೆ ಕಾನೂನು ತನ್ನ ಕ್ರಮವನ್ನು ತೆಗೆದುಕೊಳ್ಳುತ್ತದೆ ಮತ್ತು ವಶಪಡಿಸಿಕೊಂಡ ವಸ್ತುಗಳನ್ನು ಪೊಲೀಸರು ಏಕೆ ಹಾಜರುಪಡಿಸಲು ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸುವಂತೆ ಧನ್ಬಾದ್ ಪೊಲೀಸ್ ವರಿಷ್ಠಾಧಿಕಾರಿ ಆದೇಶಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth