ಜಾತಿ, ಉಪಜಾತಿಗೊಂದು ನಿಗಮ: ಮರು ವಿಲೀನವಾಗುತ್ತಾ ಅಭಿವೃದ್ಧಿ ನಿಗಮಗಳು? - Mahanayaka
12:44 PM Thursday 16 - October 2025

ಜಾತಿ, ಉಪಜಾತಿಗೊಂದು ನಿಗಮ: ಮರು ವಿಲೀನವಾಗುತ್ತಾ ಅಭಿವೃದ್ಧಿ ನಿಗಮಗಳು?

vedan sowda
06/09/2024

ಬೆಂಗಳೂರು: ರಾಜ್ಯದಲ್ಲಿ ಜಾತಿ, ಉಪ ಜಾತಿಗೊಂದರಂತೆ ಅಭಿವೃದ್ಧಿ ನಿಗಮಗಳನ್ನು ರಚನೆ ಮಾಡಲಾಗಿದೆ. ಆದ್ರೆ ಇದೀಗ ರಾಜ್ಯ ಸರ್ಕಾರವು ನಾನಾ ಅಭಿವೃದ್ಧಿ ನಿಗಮಗಳನ್ನು ಮರು ವಿಲೀನ ಮಾಡಲು ನಿರ್ಧರಿಸಿದೆ ಅಂತ ತಿಳಿದು ಬಂದಿದೆ.


Provided by

ನಿಗಮಗಳ ಅನುದಾನ ವೆಚ್ಚವಾಗ್ತಿಲ್ವಂತೆ. ಹೀಗಾಗಿ ಇಂತಹದ್ದೊಂದು ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ. ಜನ ಅರ್ಜಿ ಹಾಕಿ ಕುಳಿತರೂ ನಿಗಮದ ಸೌಲಭ್ಯಗಳು ಒಂದೆಡೆ ಸಿಗ್ತಾ ಇಲ್ಲ. ಇದೇ ಸಂದರ್ಭದಲ್ಲಿ ನಿಗಮದ ಹಣ ಖರ್ಚಾಗುತ್ತಿಲ್ಲ ಅಂತ ಸರ್ಕಾರ ನಿಗಮಗಳ ವಿಲೀನಕ್ಕೆ ಮುಂದಾಗಿದೆ.

23ಕ್ಕೂ ಹೆಚ್ಚು ನಿಗಮಗಳು ನಿರ್ದಿಷ್ಟ ಸಮುದಾಯದ ಹಿತಾಸಕ್ತಿಗೆ ಪೂರಕವಾಗುವ ಬದಲಿಗೆ, ಸಾರ್ವಜನಿಕ ಬೊಕ್ಕಸಕ್ಕೆ ಹೊರೆಯಾಗಿ ಉಳಿದಿವೆಯಂತೆ. ಹಣಕಾಸು ಇಲಾಖೆ ಆಕ್ಷೇಪದ ಹಿನ್ನೆಲೆ ಸರ್ಕಾರ ಮರು ವಿಲೀನಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ 12 ನಿಗಮಗಳನ್ನು ಡಿ.ದೇವರಾಜ ಅರಸು ನಿಗಮದಲ್ಲಿ ಸೇರಿಸುವುದು, ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ 8 ನಿಗಮಗಳನ್ನು ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ವಿಲೀನಗೊಳಿಸುವುದು ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲೂ ಕೇಂದ್ರೀಕೃತ ವ್ಯವಸ್ಥೆ ಜಾರಿ ಮಾಡಲು ಪ್ರಸ್ತಾಪಿಸಲಾಗಿದೆ.

ಈ ನಡುವೆ ಸರ್ಕಾರ ಸೌಲಭ್ಯ ಪಡೆಯುವುದು ಮತ್ತು ಸಾಲ ಮರು ಪಾವತಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿರುವ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ಮತ್ತು ಬ್ರಾಹ್ಮಣ ಅಭಿವೃದ್ಧಿ ನಿಗಮಗಳನ್ನು ಕಂದಾಯ ಇಲಾಖೆ ವ್ಯಾಪ್ತಿಯಲ್ಲೇ ಮುಂದುವರಿಸುವ ಲೆಕ್ಕಾಚಾರ ನಡೆದಿದೆಯಂತೆ. ಸರ್ಕಾರ ಆದೇಶವಾದರೂ ಇನ್ನೂ ರಚನೆಯಾಗದ ಪಿಂಜಾರ ಅಭಿವೃದ್ಧಿ ನಿಗಮ, ಕಾಡುಗೊಲ್ಲಅಭಿವೃದ್ಧಿ ನಿಗಮ ಸೇರಿ ಇನ್ನೂ ಕೆಲವು ಸಮುದಾಯಗಳ ನಿಗಮಗಳ ರಚನೆ ಪ್ರಸ್ತಾವನೆಯನ್ನು ಕೈಬಿಡುವ ಗಂಭೀರ ಚಿಂತನೆಯೂ ನಡೆದಿದೆ ಎಂದು ತಿಳಿದು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ