ಬಿಇಎಲ್ ನಲ್ಲಿ ಬೋಧಕರ ಹುದ್ದೆಗಳ ನೇಮಕಾತಿ: ಆಯ್ಕೆಯಾದವರಿಗೆ ಸಂಬಳದ ಜೊತೆಗೆ ಆಕರ್ಷಕ ಸೌಲಭ್ಯಗಳು - Mahanayaka
10:27 PM Friday 13 - September 2024

ಬಿಇಎಲ್ ನಲ್ಲಿ ಬೋಧಕರ ಹುದ್ದೆಗಳ ನೇಮಕಾತಿ: ಆಯ್ಕೆಯಾದವರಿಗೆ ಸಂಬಳದ ಜೊತೆಗೆ ಆಕರ್ಷಕ ಸೌಲಭ್ಯಗಳು

professor jobs
01/09/2024

BEL Professor Jobs — ಬೆಂಗಳೂರಿನ ಜಾಲಹಳ್ಳಿಯಲ್ಲಿ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಡೆಸುತ್ತಿರುವ ವಿದ್ಯಾ ಸಂಸ್ಥೆಗಳಲ್ಲಿ 2024–25ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅಗತ್ಯವಿರುವ ಬೋಧಕರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ವಿವಿಧ ವಿಷಯಗಳ ಒಟ್ಟು 31 ಬೋಧಕರ ಹುದ್ದೆಗಳನ್ನು ಈ ನೇಮಕಾತಿಯಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಖಾಲಿ ಇರುವ  ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಶೈಕ್ಷಣಿಕ ಅರ್ಹತೆಗಳು, ವಯೋಮಿತಿ ಅರ್ಹತೆಗಳು, ಆಯ್ಕೆಯಾದವರಿಗೆ ಸಿಗುವ ಮಾಸಿಕ ವೇತನ ಹಾಗೂ ಇತರೆ ಸೌಲಭ್ಯಗಳ ವಿವರ ಸೇರಿದಂತೆ ನೇಮಕಾತಿಯ ಸಂಪೂರ್ಣ ವಿವರವನ್ನು ತಿಳಿಸಲಾಗಿದೆ.

 ಹುದ್ದೆಗಳ ವಿವರ:


Provided by

*  ಬಿಇಎಲ್ ನ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ, ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಹಾಗೂ ಇನ್ಫಾರ್ಮಶನ್ ಟೆಕ್ನಾಲಜಿ ವಿಷಯಕ್ಕೆ ತಲಾ ಒಂದು ಹುದ್ದೆಗಳು ಖಾಲಿ ಇವೆ.

*  ಬಿಇಎಲ್ ಪಿಯು ಕಾಲೇಜ್ ನಲ್ಲಿ, ಫಿಸಿಕ್ಸ್ ಬಯಾಲಜಿ, ಸ್ಟಾಟಿಟಿಕ್ಸ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಷಯಗಳಿಗೆ ತಲಾ ಒಂದು ಹುದ್ದೆಗಳು ಖಾಲಿ ಇವೆ.

ಇದೇ ರೀತಿ ಬಿಇಎಲ್ ನ ಇತರೆ ಒಟ್ಟು 6 ಶಾಲಾ ಕಾಲೇಜುಗಳಲ್ಲಿ ಎಲ್ಲಾ ಹುದ್ದೆಗಳನ್ನು ಸೇರಿ ಒಟ್ಟು 31 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುಲಾಗುತ್ತಿದೆ.

ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆಗಳ ವಿವರ :

ಬೋಧಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಂಬಂಧಪಟ್ಟ ವಿಭಾಗಕ್ಕೆ ಅನುಗುಣವಾಗಿ ಸ್ನಾತಕೋತ್ತರ ಪದವಿ ಮುಗಿಸಿರಬೇಕು. ಡಿಎಡ್  ಬಿಎಡ್, ಏನ್ ಇಟಿ ಅಥವಾ ಎಸ್ ಎಟಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಆದ್ಯತೆ ನೀಡಲಾಗುವುದು. ವಿಶೇಷವೇನೆಂದರೆ ಫ್ರೆಷರ್ ಗಳಿಗೂ ಕೂಡ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಆಯ್ಕೆಯಾದವರೆಗೆ ಸಿಗುವ ವೇತನ ಹಾಗೂ ಇತರೆ ಸೌಲಭ್ಯಗಳ ವಿವರ :

ನೇಮಕಾತಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ 18,700 ರೂ. ಯಿಂದ 25,100 ರೂ. ವರೆಗೆ ವೇತನವನ್ನು ನಿಗದಿಪಡಿಸಲಾಗಿದೆ. ಇದರ ಜೊತೆಗೆ ಅಭ್ಯರ್ಥಿಗಳಿಗೆ ಪಿಎಫ್ ಸೌಲಭ್ಯವನ್ನು ಕೂಡ ನೀಡಲಾಗುತ್ತಿದೆ.

ಅರ್ಜಿ ಹೇಗೆ ಸಲ್ಲಿಸಬೇಕು?

ಅರ್ಹರಿರುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಿರುವ ದಾಖಲಾತಿಗಳ ಪ್ರತಿಗಳೊಂದಿಗೆ ಸರಿಯಾದ ಮಾಹಿತಿ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ವಿಳಾಸ:

Secretary, BEL Educational Institutions, BEL High School Building, Jalahalli Post, 33) Bengaluru-560013

ಅರ್ಜಿ ನಮೂನೆ ಹಾಗೂ ಇತರೆ ನೇಮಕಾತಿಯ ಮಾಹಿತಿಗಾಗಿ ಕೆಳಗಿನ ಜಾಲತಾಣಕ್ಕೆ ಭೇಟಿ ನೀಡಿ :  www.beei.edu.in/

ಇತ್ತೀಚಿನ ಸುದ್ದಿ