ಗಾಝಾದಲ್ಲಿ ನಿರಾಶ್ರಿತರು ಭಯದಲ್ಲಿ ಬದುಕುತ್ತಿದ್ದಾರೆ: 'ನನ್ನ ಕುಟುಂಬದವರನ್ನು ರಕ್ಷಿಸಿ' ಎಂದು ಕಣ್ಣೀರು - Mahanayaka
12:21 AM Saturday 23 - August 2025

ಗಾಝಾದಲ್ಲಿ ನಿರಾಶ್ರಿತರು ಭಯದಲ್ಲಿ ಬದುಕುತ್ತಿದ್ದಾರೆ: ‘ನನ್ನ ಕುಟುಂಬದವರನ್ನು ರಕ್ಷಿಸಿ’ ಎಂದು ಕಣ್ಣೀರು

19/03/2024


Provided by

ಗಾಝಾದ ಚರ್ಚ್ ನಲ್ಲಿ ನಿರಾಶ್ರಿತರು ಅತ್ಯಂತ ದುರಂತ ಬದುಕನ್ನು ಬದುಕುತ್ತಿದ್ದಾರೆ. ನನ್ನ ಬಂಧುಗಳು ಸೇರಿ ಅನೇಕ ಮಂದಿ ಭೀತಿ ಮತ್ತು ಭಯದ ಬದುಕು ನಡೆಸುತ್ತಿದ್ದಾರೆ ಎಂದು ಇಂಗ್ಲೆಂಡಿನ ಲಿಬರಲ್ ಡೆಮಾಕ್ರಟಿಕ್ ಪಕ್ಷದ ಎಂಪಿ ಲೈಲಾ ಮಿಶಲ್ ಮೊರನ್ ಅಲ್ ಜಝೀರ ಚಾನೆಲ್ ನೊಂದಿಗೆ ಹೇಳಿದ್ದಾರೆ.

ಇವರೆಲ್ಲ ಮುಂದಿನ ಒಂದು ವಾರದವರೆಗೆ ಬದುಕಿ ಉಳಿಯುತ್ತಾರೆ ಎಂಬ ನಂಬಿಕೆ ನನಗಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಗಾಝಾದ ಮೇಲೆ ಇಸ್ರೇಲ್ ನ ಆಕ್ರಮಣದ ಬಳಿಕ 300ರಷ್ಟು ಕ್ರೈಸ್ತರು ಗಾಜಾನಗರದ ಹೋಲಿ ಫ್ಯಾಮಿಲಿ ಕೆಥೋಲಿಕ್ ಚರ್ಚಿನಲ್ಲಿ ನಿರಾಶ್ರಿತರಾಗಿ ಬದುಕುತ್ತಿದ್ದಾರೆ. ಈ ಚರ್ಚಿನ ಮೇಲೆ ದಿನಗಳ ಹಿಂದೆ ಇಸ್ರೇಲ್ ದಾಳಿ ಮಾಡಿತ್ತು. ವೃದ್ಧರಾದ ಮಹಿಳೆ ಮತ್ತು ಮಗು ಸಾವಿಗೀಡಾಗಿರುವುದಾಗಿ ತಿಳಿದುಬಂದಿದೆ. ಈ ಘಟನೆಯ ಬಳಿಕ ಬ್ರಿಟನ್ನಿನ ಸಂಸದೆ ಲೈಲಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಭೀಕರವಾಗಿದೆ. 60 ದಿನಗಳಿಂದ ಈ 300ರಷ್ಟು ಮಂದಿ ಚರ್ಚಿನ ಒಳಗಡೆ ಇದ್ದಾರೆ. ಅವರ ಬದುಕು ಆಘಾತಕಾರಿಯಾಗಿದೆ. ಅಲ್ಲಿಯ ಮಾಲಿನ್ಯವನ್ನು ಸಂಗ್ರಹಿಸಲು ಬಂದವ ಕೂಡ ಹತ್ಯೆಗಿಡಾಗಿದ್ದಾನೆ. ಕಾವಲುಗಾರ ಕೂಡ ಹತ್ಯೆಗಿಡಾಗಿದ್ದಾನೆ.

ಹಲವು ದಿನಗಳಿಂದ ಆ ಅಮೃತ ದೇಹಗಳು ಅಲ್ಲಿಯೇ ಬಿದ್ದುಕೊಂಡಿವೆ ಎಂದು ಅವರು ಹೇಳಿದ್ದಾರೆ. ಹೊರಬಂದು ಶೌಚಾಲಯಕ್ಕೆ ಹೋಗುವುದಕ್ಕೂ ಭಯವಾಗುತ್ತಿದೆ. ಇಸ್ರೇಲ್ ಸೇನೆ ಜನಸಾಮಾನ್ಯರನ್ನು ರಕ್ಷಿಸುತ್ತದೆ ಎಂಬುದು ಅತ್ಯಂತ ಹಾಸ್ಯಾಸ್ಪದ ಮಾತಾಗಿದೆ. ಈ ಚರ್ಚನ್ನಾದರೂ ಆಕ್ರಮಣದಿಂದ ಹೊರಗಿಡಬೇಕು ಎಂದು ಆಗ್ರಹಿಸುತ್ತಿದ್ದೇವೆ. ನನ್ನ ಕುಟುಂಬವನ್ನಾದರೂ ರಕ್ಷಿಸಿ ಎಂದವರು ವಿನಂತಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ